Home ಸುದ್ಧಿಗಳು ರಾಜ್ಯ ಮಹಿಳಾ ಬೈಕರ್ಸ್ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ

ಮಹಿಳಾ ಬೈಕರ್ಸ್ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ

469
0

ಬೆಂಗಳೂರು: ಕನ್ನಡದ ಹೆಮ್ಮೆಯ ಮಹಿಳಾ ಬೈಕರ್ಸ್ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. ಬೆಂಗಳೂರಿನ ಸಖಿ ತಂಡದ ಸ್ವಾತಿ ಆರ್., ರಾಜಲಕ್ಷ್ಮೀ, ಅನಿತಾ, ಕೀರ್ತಿನಿ, ‘ಮಹಿಳೆಯರ ಸುರಕ್ಷತೆಯ’ ಬಗ್ಗೆ ರಾಜ್ಯದ ಮೂಲೆ ಮೂಲೆಗಳಿಗೂ ಬೈಕ್ ನಲ್ಲೇ ತೆರಳಿ ಜಾಗೃತಿ ಮೂಡಿಸಿದ್ದರು.

2022 ಎಪ್ರಿಲ್ 22 ರಂದು ಬೆಂಗಳೂರಿನಿಂದ ಆರಂಭಗೊಂಡ ಈ ಸುದೀರ್ಘ ಪಯಣ, 2022 ಮೇ 22 ರಂದು ಮುಕ್ತಾಯಗೊಂಡಿತು.

ಸಾಹಸಿ ಮಹಿಳೆಯರ ತಂಡ ಈ ಐತಿಹಾಸಿಕ ಅಭಿಯಾನದಲ್ಲಿ ರಾಜ್ಯದ ಉದ್ದಗಲಕ್ಕೆ ಸುಮಾರು 3810 ಕಿಮೀ ಸಂಚರಿಸಿ 31 ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಿದ ಕಾರ್ಯ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿತ್ತು.

ಸಾಮಾಜಿಕ ಕಳಕಳಿಯನ್ನು ಒಳಗೊಂಡ ಇಂತಹದ್ದೊಂದು ಅಭಿಯಾನ ಕರ್ನಾಟದ ಇತಿಹಾಸದಲ್ಲೇ ಮೊದಲನೆಯ ಬಾರಿ ನಡೆದಿದೆ ಎಂದರೆ ಅತಿಶಯೋಕ್ತಿ ಆಗದು. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ ನಾಲ್ವರು ಮಹಿಳೆಯರು ಬೈಕ್ ನಲ್ಲೇ ಇಷ್ಟು ದೂರ ಸಂಚರಿಸಿ ನಿರ್ಮಿಸಿದ ದಾಖಲೆ ಎಲ್ಲರಿಗೂ ಪ್ರೇರಣೆಯಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.