ಕುಮಟಾ, ಮೇ 21: ಮೇ 19 ರ ಮಧ್ಯರಾತ್ರಿ ಕರ್ಕಿಮಕ್ಕಿಯ ಬಸ್ ನಿಲ್ದಾಣದ ಬಳಿ ಕಾಡುಪಾಪ ಕಾಣಿಸಿಕೊಂಡಿದೆ. ನಂತರ ಅಲ್ಲೇ ಸಮೀಪದಲ್ಲಿದ ಮಣಿಕಂಠ ನಾಯ್ಕ, ದರ್ಶನ ನಾಯ್ಕ, ವಿನೋದ್ ಗೌಡ ಅವರು ಚಿಕ್ಕ ಮರಿ ಎಂದು ಭಾವಿಸಿ ರಕ್ಷಿಸಿದ್ದು ನಂತರ ಉರಗ ತಜ್ಞರಾದ ಸ್ನೇಕ್ ಪವನ್ ಅವರಿಗೆ ವಿಷಯ ತಿಳಿಸಿದ್ದು ಸ್ಥಳಕ್ಕೆ ಆಗಮಿಸಿ ಇದು ಮರಿ ಅಲ್ಲ, ವಯಸ್ಕ ಕಾಡುಪಾಪ ಎಂದು ತಿಳಿಸಿ ಸ್ವಲ್ಪ ಸಮಯದಲ್ಲಿಯೇ ಸಮೀಪದ ಸೂಕ್ತ ಸ್ಥಳಕ್ಕೆ ಬಿಡುಗಡೆಗೊಳಿಸಿದ್ದಾರೆ.
ಕಾಡುಪಾಪಗೆ ಸ್ಥಳೀಯವಾಗಿ ಕಾಡುಮನುಷ್ಯ ಎಂದು ಕರೆಯುತ್ತಾರೆ. ಇದರ ಮಾಂಸವನ್ನು ಔಷಧಿಗೆ ಬರುತ್ತದೆ ಎಂದು ಜನ ನಂಬಿದ್ದಾರೆ. ಆದರೆ ಇದರ ಮಾಂಸವು ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಸ್ನೇಕ್ ಪವನ್ ತಿಳಿಸಿದ್ದಾರೆ.