ಶಿರಸಿ, ಮೇ 10: ಕಲಗಾರ ಹುಲಿ ದೇವರ ಕಾಡಿನಲ್ಲಿ ಬತ್ತಿ ಹೋದ ಕಲ್ಯಾಣಿಯಲ್ಲಿ ಪುನಃ ನೀರು ಚಿಮ್ಮುವಂತೆ ಮಾಡುವ ಕಾರ್ಯ ನಡೆಯಿತು. ಯೂತ್ ಫಾರ್ ಸೇವಾ ಪರಿಸರ ವಿಭಾಗ, ಪರ್ಯಾವರನ ಸಂರಕ್ಷಣಾ ಗತಿವಿಧಿ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಈ ಮಹತ್ಕಾರ್ಯ ನಡೆಯಿತು.
ಯೂತ ಫಾರ್ ಸೇವಾ ಸಂಚಾಲನ ಸಮಿತಿಯ ಸದಸ್ಯರಾದ ಡಾ. ಗಣೇಶ್ ಹೆಗಡೆ, ನಂದೀಶ್ ವಿ., ದಿನೇಶ್ ರೇವಣಕರ್ ಮತ್ತು ಪರ್ಯಾವರಣ ಸಂರಕ್ಷಣಾ ಗತಿವಿಧಿ ಸಿರಸಿ ಜಿಲ್ಲಾ ನಾರಿ ಶಕ್ತಿ ಪ್ರಮುಖ ಅಂಜನಾ ಭಟ್, ಯೂತ್ ಫಾರ್ ಸೇವಾ ಪರಿಸರ ವಿಭಾಗದ ಕರ್ನಾಟಕದ ಪ್ರಾಂತ ಸಂಯೋಜಕ ಉಮಾಪತಿ ಭಟ್ ಉಪಸ್ಥಿತರಿದ್ದರು.