ಬೆಂಗಳೂರು: ಜನರ ಮನೆಮಾತಾಗಿದ್ದ ಸಮೃದ್ಧಿ ಹಾಲಿನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಡೀಲರುಗಳಿಗೆ ಕೆ.ಎಂ.ಎಫ್ ಕಡೆಯಿಂದ ಅಧಿಕೃತ ಮಾಹಿತಿ ಬಂದಿದೆ.
ಶುಕ್ರವಾರ ಬಹುತೇಕ ಮಂದಿ ಗ್ರಾಹಕರಿಗೆ ನಂದಿನಿ ಹಾಲಿನ ಬೂತ್ ನವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಹುತೇಕರು ಜಾಲತಾಣಗಳಲ್ಲಿ ಸಮೃದ್ಧಿ ಸ್ಥಗಿತಗೊಳಿಸಬಾರದು ಎಂದು ಸಂದೇಶ ಹಾಕಿದ್ದಾರೆ. ರಾಜ್ಯದಾದ್ಯಂತ ಹಾಲು ಉತ್ಪಾದನೆಯಲ್ಲಿ ಕುಂಠಿತವಾಗಿರುವುದು ಸಮೃದ್ಧಿಯ ಉತ್ಪಾದನೆ ತಾತ್ಕಾಲಿಕವಾಗಿ ಸ್ಥಗಿತಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ.
ನಂದಿನಿಯ ಉಳಿದ ಉತ್ಪನ್ನಗಳಾದ ಟೋನ್ಡ್ ಹಾಲು, ಹೊಮೊಜಿನೈಸ್ಡ್ ಹಸುವಿನ ಹಾಲು ಮತ್ತು ಶುಭಂ ಎಂದಿನಂತೆ ಲಭ್ಯವಿರುತ್ತದೆ. ಕೇವಲ ಸಮೃದ್ಧಿಯ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಉಳಿದ ಹಾಲಿನ ಬೇಡಿಕೆ ಮತ್ತು ಪೂರೈಕೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಹೈ ಫ್ಯಾಟ್ ಹಾಲಿನ ಉತ್ಪಾದನೆಯನ್ನು ಮಾತ್ರ ತಾತ್ಕಾಲಿಕ ಸ್ಥಗಿತಗೊಳಿಸಿದಕ್ಕೆ ಕಾರಣವಿರಬಹುದು.