Sunday, January 19, 2025
Sunday, January 19, 2025

ಪುತ್ತಿಗೆ ಶ್ರೀಪಾದರ ಚಾತುರ್ಮಾಸ್ಯ ಪೂರ್ವಭಾವಿ ಸಭೆ

ಪುತ್ತಿಗೆ ಶ್ರೀಪಾದರ ಚಾತುರ್ಮಾಸ್ಯ ಪೂರ್ವಭಾವಿ ಸಭೆ

Date:

ಬೆಂಗಳೂರು, ಮೇ 28: ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಶ್ರೀ ಸುಶ್ರೀ೦ದ್ರ ತೀರ್ಥ ಶ್ರೀಪಾದರ ಜೊತೆಗೆ ಭಕ್ತಜನರ ಅಪೇಕ್ಷೆ ಮೇರೆಗೆ ಬೆಂಗಳೂರು ನಗರದ ಗೋವರ್ಧನ ಕ್ಷೇತ್ರ ಶ್ರೀ ಪುತ್ತಿಗೆ ಮಠದಲ್ಲಿ ಚಾತುರ್ಮಾಸ್ಯವ್ರತವನ್ನು ಈ ಬಾರಿ ನಡೆಸಲಿದ್ದಾರೆ. ತತ್ಪ್ರಯುಕ್ತ ಬೆಂಗಳೂರಿನ ಗೋವರ್ಧನ ಕ್ಷೇತ್ರದಲ್ಲಿ ಮೊದಲ ಸಿದ್ದತಾ ಸಭೆಯನ್ನು ನಡೆಸಲಾಯಿತು.

ಈ ಸಭೆಯಲ್ಲಿ ಪ್ರೊಫ್, ರಾಧಾಕೃಷ್ಣರಾವ್ , ಚಂದ್ರಶೇಖರ್ ಹೆಬ್ಬಾರ್, ಗಿರಿಧರ್ ಬಜ್ಪೆ, ಜಯಂತ್ ರಾವ್, ಹರೀಶ್, ರಾಘವೇಂದ್ರ ರಾವ್, ಮಾಲಿನಿ, ಪುಷ್ಪಕ್, ಅಗ್ನಿಹೋತ್ರಿ, ಶಶಿಧರ್, ವಿನಯ್, ಟಿ.ಎಂ.ಓ ಸದಸ್ಯರು ಶ್ರೀಪತಿ ಉಪಾಧ್ಯಾಯ, ಸಂತೋಷ್ ಕೆಪಿ, ಜನಾರ್ದನ ತಂತ್ರಿ ಮುಂತಾದ ಗಣ್ಯರು ಉಪಸ್ಥಿತರಿದ್ದು ಸಲಹೆಯನ್ನು ನೀಡಿದರು. ಈ ಬಾರಿಯ ಚಾತುರ್ಮಾಸ್ಯ ಶ್ರೀಪಾದರ 50 ನೇ ಪೀಠಾರೋಹಣ ವರ್ಷವಾಗಿದ್ದು ಈ ವಿಶೇಷ ಸಂದರ್ಭದಲ್ಲಿ ಶ್ರೀಪಾದರು ಕೈಗೆತ್ತಿಕೊಂಡಿರುವ ಬೃಹತ್ ಲೋಕಕಲ್ಯಾಣ ಯೋಜನೆಯಾದ ಕೋಟಿ ಗೀತಾಲೇಖನ ಯಜ್ಞವನ್ನು ವ್ಯಾಪಕವಾಗಿ ನೊಂದಾಯಿಸಲು ತೀರ್ಮಾನಿಸಲಾಯಿತು. ಶ್ರೀ ಮಠದ ವ್ಯವಸ್ಥಾಪಕ ಕುಂಜಾರ್ ಸ್ವಾಗತಿಸಿದರು. ದಿವಾನರಾದ ನಾಗರಾಜಾಚಾರ್ಯ ಪ್ರಸ್ತಾವಿಸಿದರು. ಮುಖ್ಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!