Monday, December 22, 2025
Monday, December 22, 2025

5 ವರ್ಷದೊಳಗಿನ ಮಗುವಿಗೆ ಕಡ್ಡಾಯ ಪೋಲಿಯೋ ಲಸಿಕೆ ಹಾಕಿಸಿ: ದಿನೇಶ್‌ ಗುಂಡೂರಾವ್‌

5 ವರ್ಷದೊಳಗಿನ ಮಗುವಿಗೆ ಕಡ್ಡಾಯ ಪೋಲಿಯೋ ಲಸಿಕೆ ಹಾಕಿಸಿ: ದಿನೇಶ್‌ ಗುಂಡೂರಾವ್‌

Date:

ಬೆಂಗಳೂರು, ಡಿ.20: ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ನಾಳೆ ಭಾನುವಾರ (ಡಿ.21) ಪಲ್ಸ್ ಪೋಲಿಯೊ ಕಾರ್ಯಕ್ರಮ ಹಮ್ಮಿಕೊಂಡಿದ್ದು, 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ ಹಾಕಿಕೊಂಡಿದೆ.

ಪೋಲಿಯೊ ಹನಿ ವಿತರಣೆಗೆ 33,258 ಬೂತ್‌ಗಳನ್ನು ಗುರುತಿಸಲಾಗಿದೆ. 1,030 ಸಂಚಾರಿ ತಂಡಗಳು ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಲಸಿಕೆ ವಿತರಿಸಲಿವೆ. 2,096 ಟ್ರಾನ್ಸಿಟ್ ತಂಡಗಳನ್ನೂ ರಚಿಸಲಾಗಿದೆ. ಈ ಕಾರ್ಯಕ್ರಮಕ್ಕೆ 1.13 ಲಕ್ಷ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ. 7,322 ಮೇಲ್ವಿಚಾರಕರನ್ನು ನೇಮಿಸಲಾಗಿದೆ.

ಐದು ವರ್ಷದೊಳಗಿನ ಎಲ್ಲ ಮಕ್ಕಳು ಲಸಿಕೆ ಪಡೆದುಕೊಳ್ಳಬೇಕು. ಈ ಮೂಲಕ ಪೋಲಿಯೊ ವಿರುದ್ಧದ ಹೋರಾಟದಲ್ಲಿ ವಿಜಯ ಸಾಧಿಸುವುದನ್ನು ಮುಂದುವರಿಸಲು ಕೈಜೋಡಿಸಬೇಕು. ರಾಜ್ಯದ ಎಲ್ಲ ಆಸ್ಪತ್ರೆಗಳು, ಗ್ರಾಮೀಣ ಪ್ರದೇಶ, ಗುಡ್ಡಗಾಡು ಪ್ರದೇಶ ಸೇರಿದಂತೆ ವಿವಿಧೆಡೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ಪೋಲಿಯೊ ಹನಿ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡಬಾರದು.

ಹತ್ತಿರದ ಲಸಿಕಾ ಕೇಂದ್ರ ಪತ್ತೆಗೆ ‘Nearby Vaccination centre Karnataka’ ಆ್ಯಪ್ ಇನ್‌ಸ್ಟಾಲ್‌ ಮಾಡಿಕೊಂಡು, ಕೇಂದ್ರ ಹುಡುಕಬಹುದು ಎಂದು ಆರೋಗ್ಯ ಸಚಿವರಾದ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಗ್ರವಾದ ಮಟ್ಟಹಾಕಲು ಸಜ್ಜಾಗಿ: ಆಸ್ಟ್ರೇಲಿಯಾ ಪ್ರಧಾನಿ

ಸಿಡ್ನಿ, ಡಿ.21: ಕಳೆದ ವಾರದ ಬೋಂಡಿ ಬೀಚ್ ದಾಳಿಯ ನಂತರ ಆಸ್ಟ್ರೇಲಿಯಾದ...

ಇಸ್ರೋ ಸಂವಹನ ಉಪಗ್ರಹ ಬ್ಲೂಬರ್ಡ್ ಬ್ಲಾಕ್ -2 ಅನ್ನು ಉಡಾವಣೆಗೆ ಸಿದ್ಧತೆ

ನವದೆಹಲಿ, ಡಿ.21: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಸಂವಹನ...

ರೋಟರಿ ಸಮುದಾಯ ದಳ ಇನ್ನಂಜೆ: ಮನೆ ಹಸ್ತಾಂತರ

ಇನ್ನಂಜೆ, ಡಿ.21: ರೋಟರಿ ಸಮುದಾಯ ದಳ ಇನ್ನಂಜೆ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ...

ಯಕ್ಷಗಾನ ಕಲಾರಂಗ (ರಿ.) ಉಡುಪಿ: ಮನೆ ಹಸ್ತಾಂತರ

ಉಡುಪಿ, ಡಿ.21: ಯಕ್ಷಗಾನ ಕಲಾರಂಗ (ರಿ.) ಉಡುಪಿ ಇವರ ವತಿಯಿಂದ ದಾನಿಗಳ...
error: Content is protected !!