ಉಡುಪಿ: ನೆಹರು ಯುವ ಕೇಂದ್ರವು ಆಯೋಜಿಸಿದ “ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು (Patriotism and Nation Building) ಕುರಿತ ರಾಜ್ಯಮಟ್ಟದ ಇಂಗ್ಲೀಷ್ ಭಾಷೆಯ ಭಾಷಣ ಸ್ಪರ್ಧೆಯಲ್ಲಿ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ಟಿ. ಶರಣ್ಯ ನಾಯಕ್ ಇವರು ಪ್ರಥಮ ಸ್ಥಾನದೊಂದಿಗೆ ರೂ. 25,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಪಡೆದಿದ್ದು, ಜನವರಿಯಲ್ಲಿ ನವದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಇವರು ಕಾರ್ಕಳದ ರಾಜಾರಾಮ್ ನಾಯಕ್ ಹಾಗೂ ರಾಜೇಶ್ವರಿ ನಾಯಕ್ರವರ ಪುತ್ರಿ.