ಬ್ರಹ್ಮಾವರ: ಸ. ಹಿ. ಪ್ರಾ. ಶಾಲೆ ಸಾಯ್ಬ್ರಕಟ್ಟೆಯಲ್ಲಿ ಶಾಲಾ ಗ್ರಂಥಾಲಯ ಹೊತ್ತಗೆಯ ಹೊತ್ತು, ಶೌಚಾಲಯ ಉದ್ಘಾಟನೆ, ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ನೂತನ ಶೌಚಾಲಯವನ್ನು ಶಾಲಾಭಿಮಾನಿ ನಿರಂಜನ ಹೆಗ್ಡೆ ಮತ್ತು ಯಡ್ತಾಡಿ ಗ್ರಾಮ ಪಂಚಾಯತ್ ಅಮೃತ ಪೂಜಾರಿ ಹಾಗೂ ಸವಿತಾ ಪುರುಷೋತ್ತಮ ದೇವಾಡಿಗ ಇವರು ಉದ್ಘಾಟಿಸಿದರು.
ಶಾಲಾ ಗ್ರಂಥಾಲಯ ಹೊತ್ತಗೆಯ ಹೊತ್ತು ನ್ನು ದಾನಿಗಳಾದ ಕಲಾವತಿ ಶೆಟ್ಟಿ ಹಾಗೂ ಸುಲತ ಶೆಟ್ಟಿ ಇವರ ಪರವಾಗಿ ರೋಶನ್ ಬಲ್ಲಾಳ್ ಮತ್ತು ರವೀಂದ್ರನಾಥ ಕಿಣಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಗ್ರಂಥಾಲಯವು ಮಕ್ಕಳ ಜ್ಞಾನಾರ್ಜನೆಗೆ ಸಹಕಾರವಾಗಲಿ. ಶಾಲಾ ಹಳೆ ವಿದ್ಯಾರ್ಥಿಗಳು ಶಾಲಾಭಿವೃದ್ಧಿಯಲ್ಲಿ ತೊಡಗಿ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಶ್ರಮಿಸಬೇಕಿದೆ ಎಂದರು.
ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಬಿ ಟಿ ನಾಯಕ್ ಇವರು ಸಿ ವಿ ರಾಮನ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶಾಲಾಭಿವೃದ್ಧಿಯ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಶೋಕ ಪ್ರಭು, ರೋಟರಿ ಕ್ಲಬ್ ನ ಅಧ್ಯಕ್ಷರಾದ ಯು.ಪ್ರಸಾದ ಭಟ್, ಉದ್ಯಮಿ ಸಂಕಯ್ಯ ಶೆಟ್ಟಿ, ಮಂದಾರ್ತಿ ಹೋಬಳಿ ಶಿಕ್ಷಣ ಸಂಯೋಜಕರಾದ ರಾಘವ ಶೆಟ್ಟಿ, ಸಿ ಆರ್ ಪಿ ಚಂದ್ರಶೇಖರ್, ಶಾಲಾಭಿಮಾನಿಯವರಾದ ಜಗದೀಶ ಹೆಗ್ಡೆ, ಭಾಸ್ಕರ್ ಆಚಾರ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ಸತೀಶ್ಚಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕರಾದ ಗಜೇಂದ್ರ ಶೆಟ್ಟಿ ಸ್ವಾಗತಿಸಿ, ರಾಜಶೇಖರ ವಂದಿಸಿದರು. ಸುರೇಂದ್ರ ಕಾರ್ಯಕ್ರಮ ನಿರೂಪಿಸಿದರು.