Home ಸುದ್ಧಿಗಳು ಪ್ರಾದೇಶಿಕ ನರ್ಮ್ ಬಸ್ ವ್ಯವಸ್ಥೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಆಗ್ರಹ

ನರ್ಮ್ ಬಸ್ ವ್ಯವಸ್ಥೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಆಗ್ರಹ

510
0

ಜಿಲ್ಲೆಯಲ್ಲಿ ಸರಕಾರಿ ಆದೇಶದ ನಿಯಮದಂತೆ ಲಾಕ್ ಡೌನ್ ತೆರವುಗೊಳಿಸಲಾಗಿದೆ. ಹಾಗಾಗಿ ವಾಣಿಜ್ಯ ಚಟುವಟಿಕೆಗಳು, ನಿರ್ಮಾಣ ಕಾಮಗಾರಿಗಳು, ವೃತ್ತಿ ಬದುಕುಗಳು ಪ್ರಾರಂಭಗೊಂಡಿವೆ. ಜನಜೀವನ ನಿಧಾನಗತಿಯಲ್ಲಿ ಸಹಜಸ್ಥಿತಿಗೆ ಬರುವ ಲಕ್ಷಣಗಳು ಕಂಡುಬಂದಿದೆ. ಆದರೆ ನಾಗರಿಕರು, ಕೂಲಿ ಕಾರ್ಮಿಕರು, ಉದ್ಯೋಗಿಗಳು, ಸಂಚಾರ ಸೌಕರ್ಯ ಇಲ್ಲದೆ, ಅಸಹಾಯಕ ಪರಿಸ್ಥಿತಿ ಎದುರಿಸುತ್ತಿರುವುದು ಕಂಡುಬಂದಿದೆ. ನಗರದಲ್ಲಿ ನರ್ಮ್ ಬಸ್ಸು, ಖಾಸಗಿ ನಗರ ಸಂಚಾರದ ಬಸ್ಸುಗಳು ಯಾವೊಂದು ಸಂಚರಿಸುತ್ತಿಲ್ಲ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು, ನಗರ ಹೊರ ವಲಯದ ಕಾರ್ಮಿಕರು, ಸಾರ್ವಜನಿಕರು ದುಡಿಮೆಗಾಗಿ ಕಿಮೀ ಗಟ್ಟಲೇ ದೂರವನ್ನು ನಡಿಗೆಯಲ್ಲಿ ಸಂಚರಿಸಬೇಕಾಗಿರುವ ಚಿಂತಾಜನಕ ಪರಿಸ್ಥಿತಿಯು ಉಡುಪಿ ನಗರದಲ್ಲಿ ಉದ್ಭವವಾಗಿದೆ.

ಲಾಕ್ ಡೌನ್ ಸಮಯದಲ್ಲಿ ದುಡಿಮೆ ಇಲ್ಲದೆ ಮನೆಯಲ್ಲಿ ದಿನಗಳ ಕಳೆಯುತ್ತಿದ್ದ ಶ್ರಮಿಕರು, ಅನ್ ಲಾಕ್ ಸಮಯದಲ್ಲಿ ದುಡಿಮೆಗೆ ಹೋಗಲು ನರ್ಮ್ ಬಸ್ಸು ಸಂಚಾರ ವ್ಯವಸ್ಥೆ ಇಲ್ಲದೆ , ಕಾರ್ಮಿಕರ ಬದುಕು ಮತ್ತುಷ್ಟು ಬಿಗುಡಾಯಿಸಿದೆ. ಹಾಗಾಗಿ ಜಿಲ್ಲಾಡಳಿತ, ನಗರ ಸಾರಿಗೆ ಸಂಸ್ಥೆ, ಶಾಸಕರು ತಕ್ಷಣ, ನರ್ಮ್ ಬಸ್ಸು ಸಂಚಾರದ ವ್ಯವಸ್ಥೆಯನ್ನು ಕೋವಿಡ್ ನಿಯಂತ್ರಣ ಸರಕಾರಿ ನಿಯಮದಂತೆ, ಉಡುಪಿ ನಗರದಲ್ಲಿ ವ್ಯವಸ್ಥೆಗೊಳಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.