ಹೆಬ್ರಿ: ಶೈಕ್ಷಣಿಕ ಸಾಮಾಜಿಕ ಆರ್ಥಿಕ ಹೀಗೆ ಎಲ್ಲಾ ರಂಗದಲ್ಲೂ ವಿಶೇಷವಾಗಿ ಗುರುತಿಸಿಕೊಂಡಿರುವ ಶಾಂತಿನಿಕೇತನ ಯುವ ವೃಂದ ಉಡುಪಿ ಪರ್ಯಾಯ ಅದಮಾರು ಮಠದ ಶ್ರೀ ಶ್ರೀ ಈಶಪ್ರೀಯ ತೀರ್ಥ ಶ್ರೀಪಾದರ ಸಲಹೆಯಂತೆ 2020 ರಿಂದಲೂ ಹಡಿಲು ಭೂಮಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ.
ಕುಚ್ಚೂರಿನ ಜಾರ್ಮಕ್ಕಿ ಸತೀಶ್ ಶೆಟ್ಟಿ ಅವರು ಉಚಿತವಾಗಿ ನೀಡಿದ ಸುಮಾರು 3 ಎಕ್ರೆ ಪ್ರದೇಶದಲ್ಲಿ ಶಾಂತಿನಿಕೇತನ ಸೌಹಾರ್ದ ಸಹಕಾರಿಯ ಆರ್ಥಿಕ ನೆರವಿನಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಕಳೆದ ಜುಲೈನಲ್ಲಿ ಖಾತೆ (ಮುಂಗಾರು ಬೆಳೆ) ಕೃಷಿ ಅತಿಯಾದ ಮಳೆಯ ಕಾರಣ ನಷ್ಟ ಅನುಭಸಿದರೂ ಛಲ ಬಿಡದ ಸಂಘದ ಸದಸ್ಯರು ಸುಗ್ಗಿ ಕೃಷಿಯಲ್ಲಿ ತೊಡಗಿದ್ದಾರೆ.
ಸಂಘದ ಹಡಿಲು ಭೂಮಿ ಕೃಷಿಯಲ್ಲಿ ಬೆಳೆದ ಭತ್ತದಲ್ಲಿ ತಮ್ಮದೇ ಬ್ರ್ಯಾಂಡ್ ನಲ್ಲಿ ಶಾಂತಿನಿಕೇತನ ಕಜೆ ಅಕ್ಕಿ ಹೊರತರಲಾಗಿತ್ತು.
ಸಂಘದ ಅಧ್ಯಕ್ಷರಾದ ರಾಜೇಶ್, ಸದಸ್ಯರಾದ ಜಯಕರ, ರವೀಶ್ ಶೆಟ್ಟಿ, ನರೇಂದ್ರ, ಪ್ರಸನ್ನ, ರಾಜೇಶ್ರೀ, ವಿನೋದಾ, ಚಂದ್ರಾವತಿ, ಕಲಾವತಿ, ಶಾರದಾ, ವನಜಾ, ಮೀನಾಕ್ಷಿ ಮತ್ತಿತರರು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.