Monday, January 20, 2025
Monday, January 20, 2025

ವ್ಯಸನಗಳಿಗೆ ಯುವಜನತೆ ಬಲಿಯಾಗದೇ ದೂರವಿರಬೇಕು: ಡಾ. ಪಿ.ವಿ. ಭಂಡಾರಿ

ವ್ಯಸನಗಳಿಗೆ ಯುವಜನತೆ ಬಲಿಯಾಗದೇ ದೂರವಿರಬೇಕು: ಡಾ. ಪಿ.ವಿ. ಭಂಡಾರಿ

Date:

ಉಡುಪಿ: ದುಶ್ಚಟಗಳು ಮನುಷ್ಯನಿಗೆ ತಾತ್ಕಾಲಿಕವಾಗಿ ಸುಖ ನೀಡಿದರೂ, ನಂತರದಲ್ಲಿ ಅವನ ಅಮೂಲ್ಯವಾದ ಸಮಯ, ಆರೋಗ್ಯ, ಗೌರವವನ್ನು ಹಾಳು ಮಾಡುವುದರ ಜೊತೆಗೆ ಆರ್ಥಿಕ ನಷ್ಠವನ್ನು ಉಂಟು ಮಾಡುತ್ತದೆ. ಇದರಿಂದ ಯುವಜನರು ದೂರ ಇರುವುದು ಒಳಿತು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು.

ಅವರು ಮಣಿಪಾಲದ ಡಾ. ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜಿನಲ್ಲಿ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಡಾ. ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜು ಮಣಿಪಾಲ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಡಾ. ಮಹಾಂತೇಶ ಶಿವಯೋಗಿಗಳ ಜನ್ಮದಿನ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕ್ಷಣಿಕ ಸುಖಕ್ಕಾಗಿ ಜನರು ವ್ಯಸನಕ್ಕೆ ದಾಸರಾಗುವುದರೊಂದಿಗೆ, ದುಶ್ಚಟಗಳ ಚಕ್ರವ್ಯೂಹದಲ್ಲಿ ಸಿಲುಕಿ ಅದರಿಂದ ಹೊರಬರುವುದು ಕಷ್ಠಸಾಧ್ಯ. ಯುವಜನರು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ಉತ್ತಮ ಶಿಕ್ಷಣ ಹೊಂದಿ, ಭವಿಷ್ಯದಲ್ಲಿ ಸತ್ಪçಜೆಗಳಾಗಿ ಸದೃಡ ಭಾರತ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ಡಾ.ಮಹಾಂತೇಶ ಶಿವಯೋಗಿಗಳು ಮೂಲತಃ ವಿಜಯಪುರ ಜಿಲ್ಲೆಯಲ್ಲಿ ಜನಿಸಿ, ನಂತರ ಯೋಗಿಗಳಾಗಿ ರಾಜ್ಯ, ದೇಶ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಜೋಳಿಗೆ ಹಿಡಿದು ಜನರಲ್ಲಿನ ವ್ಯಸನಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಳ್ಳುವುದರೊಂದಿಗೆ ಅವರ ಮನಪರಿವರ್ತಿಸಿ, ಉತ್ತಮ ಜೀವನ ನಡೆಸಲು ತಿಳಿ ಹೇಳಿದಂತಹ ಮಹಾನ್ ವ್ಯಕ್ತಿ ಎಂದರು.

ಜಾಹೀರಾತು

ಸರಕಾರ ಆರೋಗ್ಯವಂತ ಸಮಾಜ ಹೊಂದಬೇಕು ಎಂಬ ಆಶೋತ್ತರಗಳೊಂದಿಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಡಾ.ಮಹಾಂತೇಶ ಶಿವಯೋಗಿ ಸ್ವಾಮೀಜಿಯವರು 20-21 ನೇ ಶತಮಾನದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ತಮ್ಮ ಜೋಳಿಗೆಯಲ್ಲಿ ದುಶ್ಚಟಗಳ ಭಿಕ್ಷೆಯನ್ನು ಬೇಡಿ ಪರಿವರ್ತನೆಗೆ ಮುಂದಾಗಿದ್ದರ ಹಿನ್ನೆಲೆಯಲ್ಲಿ ಅವರ ಜನ್ಮದಿನಾಚರಣೆಯನ್ನು ವ್ಯಸನ ಮುಕ್ತ ದಿನವನ್ನಾಗಿ ಆಚರಿಸುತ್ತಿದೆ ಎಂದರು.

ಮನೋವೈದ್ಯರಾದ ಡಾ. ಪಿ.ವಿ. ಭಂಡಾರಿ ಮಾತನಾಡಿ, ಸಾಮಾನ್ಯವಾಗಿ ವಿದ್ಯಾರ್ಥಿ ಜೀವನದಲ್ಲಿ ಯುವಜನರು ತಮ್ಮ ಸ್ನೇಹಿತರ ಸಹವಾಸ ಹಾಗೂ ಪ್ರಚೋದನೆಯಿಂದಾಗಿ ಕೆಟ್ಟ ಚಟಗಳನ್ನು ಕಲಿಯುತ್ತಾರೆ. ಅಂತಹ ಹವ್ಯಾಸಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಕುಂಠಿತಗೊಳಿಸುವುದರ ಜೊತೆಗೆ ಅವರ ಭವಿಷ್ಯವನ್ನು ಕತ್ತಲೆಗೆ ತಳ್ಳುತ್ತದೆ. ಇಂತಹ ವ್ಯಸನಗಳಿಗೆ ಯುವಜನತೆ ಬಲಿಯಾಗದೇ ದೂರವಿರಬೇಕು ಎಂದರು.

ಮನೋವೈದ್ಯರಾದ ಅವರು, ತಮ್ಮ ದೈನಂದಿನ ವೃತ್ತಿ ಜೀವನದಲ್ಲಿ ಯುವಜನರು ದುಶ್ಟಟಗಳಿಗೆ ದಾಸರಾಗಿ ಜೀವನವನ್ನು ಹಾಳುಗೆಡವಿಕೊಂಡ ನಿದರ್ಶನಗಳನ್ನು ವಿದ್ಯಾರ್ಥಿಗಳಿಗೆ ಮನ ಮುಟ್ಟುವ ರೀತಿಯಲ್ಲಿ ತಿಳಿಸಿ, ಸ್ವಾಮಿ ವಿವೇಕಾನಂದರ ನುಡಿಯಂತೆ, ಪ್ರಸ್ತುತ ನಮ್ಮ ಜೀವನದ ಶಿಲ್ಪಿಗಳು ನಾವೇ ಜೀವನದ ದಾರಿಯಲ್ಲಿ ಒಳಿತು ಮತ್ತು ಕೆಡುಕುಗಳನ್ನು ಅಲೋಚಿಸಿ ಮುಂದುವರಿಯುವುದು ಸೂಕ್ತ ಎಂದರು.

ಕಾರ್ಯಕ್ರಮದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಡಾ.ಮಹಾಂತೇಶ ಶಿವಯೋಗಿಗಳ ಹಿನ್ನೆಲೆ ಹಾಗೂ ಸಮಾಜದಲ್ಲಿ ಅವರು ಜಾರಿಗೆ ತಂದ ಸುಧಾರಣೆ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಅವರಿಗಿದ್ದ ದೂರದೃಷ್ಠಿಯ ಬಗ್ಗೆ ತಿಳಿಸಿದರು.

ಕಾಲೇಜಿನ ಉಪಪ್ರಾಂಶುಪಾಲ ಡೇರಿಕ್ ಮಸ್ಕರೇನಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿ, ಭಾಷಣ ಸ್ಪರ್ದೇಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ನರೇಂದ್ರ ಪೈ, ಕಾಲೇಜಿನ ಶೈಕ್ಷಣಿಕ ಸಂಯೋಜಕ ರಂಗ ಪೈ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಿಯಾಂಕ ನಿರೂಪಿಸಿ, ಸತ್ಯವ್ರತಾ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಕೆರೆ ಮರು ನಿರ್ಮಾಣಕ್ಕೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ

ಮಣಿಪಾಲ, ಜ.20: ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಕಾಮಗಾರಿ ಸ್ಥಳಕ್ಕೆ...

ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ

ಕೋಟ, ಜ.20: ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ...

ಪಂಚವರ್ಣದ ನೇತೃತ್ವದಲ್ಲಿ 238 ನೇ ವಾರದ ಪರಿಸರ ಸ್ನೇಹಿ ಅಭಿಯಾನ

ಕೋಟ, ಜ.20: ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಪಂಚವರ್ಣ...

ಹನೆಹಳ್ಳಿ: ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣೆ

ಬಾರಕೂರು, ಜ.20: ಲಯನ್ಸ್ ಕ್ಲಬ್ ಬಾರ್ಕೂರು (Dist 317 zone 1Region...
error: Content is protected !!