ಉಡುಪಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಉಡುಪಿ ಜಿಲ್ಲೆಯಲ್ಲಿ ಸುಮಾರು ಐದು ವರ್ಷಗಳ ಕಾಲ ಅಭಿವೃದ್ಧಿ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಈಗ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಯಾಗಿರುವ ಚಂದ್ರಿಕಾ ಎಸ್ ನಾಯಕ್ ಇವರ ಬೀಳ್ಕೊಡುಗೆ ಕಾರ್ಯಕ್ರಮ ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಖೆಯಲ್ಲಿ ಜರಗಿತು.
ಬಾಲ್ಯದಲ್ಲಿ ಸರಕಾರಿ ಶಾಲೆಯ ಶಿಕ್ಷಣವು ನನ್ನ ಜೀವನದಲ್ಲಿ ಉತ್ತಮ ವ್ಯೆಕ್ತಿತ್ವ ಹಾಗೂ ನನ್ನ ತಂದೆ ತಾಯಿ ಹೇಳಿಕೊಟ್ಟ ಸಂಸ್ಕೃತಿ ಇಂದು ಉತ್ತಮ ಜೀವನ ರೂಪಿಸಿದೆ. ಜಿಲ್ಲೆಯಲ್ಲಿ ಅಧಿಕಾರಿಗಳ ಹಾಗೂ ಸಿಬಂದ್ಧಿಗಳ ಸಹಾಯದಿಂದ ಸರಕಾರದ ಯೋಜನೆಗಳನ್ನು ಜನರಿಗೆ ಅದರಲ್ಲೂ ಸಮಾಜದ ಶೋಷಿತ ವರ್ಗದವರಿಗೆ ಅತ್ಯಂತ ಪ್ರಾಮಾಣಿಕವಾಗಿ ತಲುಪಿಸಲಾಗಿದೆ ಎಂದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ಮಾತನಾಡಿ, ಚಂದ್ರಿಕಾ ಎಸ್ ನಾಯಕ್ ಇವರು ಒಂದು ಉತ್ತಮ ಕಾರ್ಯವೈಖರಿಯ ಮೂಲಕ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ನಿಗಮದ ಯೋಜನೆಗಳನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುವಲ್ಲಿ ಇವರ ಪರಿಶ್ರಮ ಬಹಳಷ್ಟಿದೆ. ಎಲ್ಲಾ ಸಿಬ್ಬಂದಿಗಳಿಗೂ ಓರ್ವ ಮಾರ್ಗದರ್ಶಕರಾಗಿರುವ ಇವರ ಕೆಲಸದ ಮನೋಭಾವವನ್ನು ಹಾಗೂ ಜೀವನ ಶೈಲಿಯನ್ನು ನಾವು ಇಂದು ಯುವ ಸಿಬ್ಬಂದಿಗಳು ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಖೆಯ ಉಪ ನಿರ್ದೇಶಕರಾದ ವೀಣಾ ವಿವೇಕಾನಂದ ಇವರು ಮಾತನಾಡಿ, ಚಂದ್ರಿಕಾ ಇವರು ಓರ್ವ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಹಾಗೂ ಉತ್ತಮ ಸ್ನೇಹಜೀವಿ. ಅನೇಕ ಜವಾಬ್ದಾರಿಗಳನ್ನು ಅತ್ಯಂತ ತಾಳ್ಮೆ ಮತ್ತು ಆಸಕ್ತಿಯಿಂದ ನಿರ್ವಹಿಸಿರುತ್ತಾರೆ. ಇವರ ವ್ಯೆಕ್ತಿತ್ವ ಇತರರಿಗೆ ಒಂದು ಮಾದರಿ, ಇವರ ಮುಂದಿನ ವೃತಿ ಜೀವನ ಉತ್ತಮವಾಗಿರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಸೂಪರಿಂಟೆಂಡೆಂಟ್ ನಾಗರಾಜ್, ಪುಷ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ನಾಯ್ಕ್ ಹಾಗೂ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.