ಉಡುಪಿ: ಕನಾ೯ಟಕ ರಾಜ್ಯ ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಮತ್ತು ಜಯಂಟ್ಸ್ ಗ್ರೂಫ್ ಆಫ್ ಬ್ರಹ್ಮಾವರ ಇದರ ವತಿಯಿಂದ 20 ನೇ ವರ್ಷದ ವೈದ್ಯರ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭ ಕಾರ್ತಿಕ್ ಎಸ್ಟೇಟ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಡಿ.ಎಚ್.ಒ ಡಾ. ನಾಗಭೂಷಣ್ ಉಡುಪ ವೈದ್ಯರ ಸೇವೆ ಅತ್ಯಂತ ಅಮೂಲ್ಯವಾದ ಸೇವೆ. ವೈದ್ಯರು ತಮ್ಮ ಈ ಅಪೂರ್ವ ಸೇವೆಯ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ. ಆದರೆ ವೈದ್ಯರ ಮೇಲೆ ನಡೆಯುತ್ತಿರುವ ಅಮಾನವೀಯ ಹಲ್ಲೆ ಪ್ರಕರಣಗಳು ಖಂಡನೀಯ ಎಂದರು.
ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ವೈದ್ಯಕೀಯ ಪ್ರತಿನಿಧಿಗಳ ಸೇವೆ ಉತ್ತಮವಾದದ್ದು. ಹೊಸ ಔಷಧಗಳ ಬಗ್ಗೆ ಅವರಿಂದ ವೈದ್ಯರುಗಳಿಗೆ ಮಾಹಿತಿ ಸಿಗುತ್ತಿದೆ. ವೈದ್ಯರು ಮತ್ತು ರೋಗಿಗಳ ಮಧ್ಯೆ ವೈದ್ಯಕೀಯ ಪ್ರತಿನಿಧಿಗಳು ಕೊಂಡಿ ಇದ್ದ ಹಾಗೆ ಎಂದರು.
ಐ.ಎಂ.ಎ ಉಡುಪಿ ಕರಾವಳಿ ಅಧ್ಯಕ್ಷ ಡಾ. ಕಲ್ಯ ವಿನಾಯಕ್ ಶೆಣೈ ವೈದ್ಯರನ್ನು ಗುರುತಿಸಿ ಅವರ ಸೇವೆಗೆ ಕಳೆದ 20 ವರ್ಷಗಳಿಂದ ಮನ್ನಣೆ ನೀಡುತ್ತಿರುವ ವೈದ್ಯಕೀಯ ಪ್ರತಿನಿಧಿಗಳ ಸಂಘ ಮತ್ತು ಜಯಂಟ್ಸ್ ಗ್ರೂಪ್ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕುಡೆ ವಹಿಸಿದ್ದರು. ವೇದಿಕೆಯಲ್ಲಿ ವೈದ್ಯಕೀಯ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಸತೀಶ್ ಹೆಗ್ಡೆ, ಜಯಂಟ್ಸ್ ಕಾರ್ಯದರ್ಶಿ ಶ್ರೀನಾಥ್ ಕೋಟ ಮುಂತಾದವರಿದ್ದರು.ಸ್
ಹಿರಿಯ ಸಾಧಕ ವೈದ್ಯರಾದ ಕೆ.ಎಂ.ಸಿ ಮಣಿಪಾಲದ ಡಾ. ರವೀಂದ್ರ ಪ್ರಭು ಎ, ಕಟಪಾಡಿ ಸರಸ್ವತಿ ಕ್ಲಿನಿಕ್ ನ ಡಾ. ರವೀಂದ್ರನಾಥ್ ಶೆಟ್ಟಿ, ಡಾ. ಎನ್.ಆರ್ ಆಚಾರ್ಯ ಆಸ್ಪತ್ರೆಯ ಪ್ರಮುಖರಾದ ಡಾ. ಸಬಿತಾ ಬಿ. ಆಚಾರ್ಯ, ಕೆ.ಎಂ.ಸಿ ಮಕ್ಕಳ ತಜ್ಞ ಡಾ. ಶ್ರೀಕಿರಣ್ ಹೆಬ್ಬಾರ್, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲಿಗ್ರಾಮದ ಡಾ. ರಾಘವೇಂದ್ರ ರಾವ್ ರವರನ್ನು ಸನ್ಮಾನಿಸಲಾಯಿತು.
ಸುಂದರ ಪೂಜಾರಿ ಸ್ವಾಗತಿಸಿ, ಮಂಜುನಾಥ್ ಕಾರಂತ್, ಸುಬ್ರಮಣ್ಯ ಆಚಾರ್ಯ, ಮಾಧವ ಉಪಾಧ್ಯ, ಅನಂತಕೃಷ್ಣ ಹೊಳ್ಳ, ಶ್ರೀಕಾಂತ್ ಪೂಜಾರಿ, ವಿವೇಕ ಕಾಮತ್ ಪರಿಚಯಿಸಿದರು. ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಸ್ತಾವನೆಗೈದರು. ವೈದ್ಯಕೀಯ ಪ್ರತಿನಿಧಿ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.