ಕಾರ್ಕಳ: ಇಲ್ಲಿಗೆ ಸಮೀಪದ ಕುಕ್ಕುಂದೂರಿನ ಕಾರ್ಕಳ ಜ್ಞಾನಸುಧಾದಿಂದ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾದ 566 ವಿದ್ಯಾರ್ಥಿಗಳಲ್ಲಿ 563 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.99.5 ಫಲಿತಾಂಶ ಬಂದಿರುತ್ತದೆ. ಕಾಮರ್ಸ್ ವಿಭಾಗದಿಂದ ಹಾಜರಾದ 62 ವಿದ್ಯಾರ್ಥಿಗಳಲ್ಲಿ ಎಲ್ಲರೂ ತೇರ್ಗಡೆಯಾಗಿ ಶೇ.100 ಫಲಿತಾಂಶ ದಾಖಲಾಗಿರುತ್ತದೆ.
ವಿಜ್ಞಾನ ವಿಭಾಗದಿಂದ 504 ವಿದ್ಯಾರ್ಥಿಗಳಲ್ಲಿ 501 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ 99.4% ಬಂದಿರುತ್ತದೆ. ವಿಜ್ಞಾನ ವಿಭಾಗದಲ್ಲಿ ಚಿರಂತ್ ಕೆ ಹಾಗೂ ಪ್ರಜ್ಞಾ ವಿ ಅವರು 595 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಛಾಯಾ ಪೈ 594 ಅಂಕ ಗಳಿಸಿ ಉಡುಪಿ ಜಿಲ್ಲೆಗೆ ಮೊದಲ ಸ್ಥಾನಿಯಾಗಿ, ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ್ದಾರೆ.
ಒಟ್ಟು 10 ಮಂದಿ ವಿದ್ಯಾರ್ಥಿಗಳು 590ಕ್ಕಿಂತ ಅಧಿಕ ಅಂಕ ಗಳಿಸಿದ್ದು, ವಿಜ್ಞಾನ ವಿಭಾಗದಲ್ಲಿ ಚಿರಂತ್ ಕೆ (595), ಪ್ರಜ್ಞಾ .ವಿ (595), ಸ್ತುತಿ (593), ದಿಯಾ ಉದಯ್ ಶೆಟ್ಟಿ(592), ಉತ್ತಮ್ (592), ವೈಷ್ಣವಿ ಎನ್(590), ಅಖಿಲ್ ವಾಗ್ಲೆ(590), ವಾಣಿಜ್ಯ ವಿಭಾಗದಲ್ಲಿ ಛಾಯಾ ಪೈ (594), ರಶ್ಮಿತಾ ಶೆಟ್ಟಿ(592), ಸಾತ್ವಿಕ್ ಪ್ರಭು(591) ಅಂಕ ಗಳಿಸಿದ್ದಾರೆ.
17 ವಿದ್ಯಾರ್ಥಿಗಳು ಶೇ. 98 ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರುತ್ತಾರೆ. ವಿಷಯವಾರು ವಿಭಾಗದಲ್ಲಿ 100ಕ್ಕೆ100 ಅಂಕವು ಗಣಿತಶಾಸ್ತ್ರದಲ್ಲಿ 148, ಭೌತಶಾಸ್ತ್ರದಲ್ಲಿ 23, ರಸಾಯನ ಶಾಸ್ತ್ರದಲ್ಲಿ 43, ಜೀವಶಾಸ್ತ್ರದಲ್ಲಿ 30, ಗಣಕ ವಿಜ್ಞಾನದಲ್ಲಿ 45, ಸಂಖ್ಯಾಶಾಸ್ತ್ರದಲ್ಲಿ 22, ವ್ಯವಹಾರ ಅಧ್ಯಯನದಲ್ಲಿ 10, ಲೆಕ್ಕಶಾಸ್ತ್ರದಲ್ಲಿ 15, ಮೂಲಗಣಿತದಲ್ಲಿ 6, ಸಂಸ್ಕೃತ 41, ಕನ್ನಡದಲ್ಲಿ 2, ಹಿಂದಿಯಲ್ಲಿ 2 ಸೇರಿ ಒಟ್ಟು 387 ಪತ್ರಿಕೆಯು ನೂರಕ್ಕೆ ನೂರು ಅಂಕ ಪಡೆದಿರುತ್ತದೆ.