ತೆಂಕನಿಡಿಯೂರು, ಮಾ.29: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು ಉಡುಪಿ ಇದರ ವಾಣಿಜ್ಯ ಸ್ನಾತಕೋತ್ತರ ವಿಭಾಗ ಹಾಗೂ ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ “ಡೇಟಾ ಎನಾಲಿಸಿಸ್ ಯೂಸಿಂಗ್ ಎಸ್.ಪಿ.ಎಸ್.ಎಸ್.-– ಎ ಹ್ಯಾಂಡ್ಸ್ ಆನ್ ಎಪ್ರೋಚ್” ಎಂಬ ವಿಷಯದ ಕಾರ್ಯಾಗಾರ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಹಮೀದಾ ಬಾನು ಬೇಗಂ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಜಿ.ಎಫ್.ಜಿ.ಸಿ. ಉಪ್ಪಿನಂಗಡಿ ಕಾಲೇಜಿನ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಸಂಧ್ಯಾ ಎಂ. ಅವರು SPSS ಬಳಕೆಯ ಮಹತ್ವ ಮತ್ತು ಸಂಶೋಧನೆಯಲ್ಲಿ ಅದರ ಉಪಯೋಗಗಳ ಕುರಿತು ವಿವರವಾಗಿ ತಿಳಿಸಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ ಶ್ರೀಧರ್ ಭಟ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಬಿಂದು ಟಿ., ಎಂಕಾಂ ಸಂಯೋಜಕರಾದ ಡಾ. ದತ್ತ ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಮರ್ವಿನ್ ಡಿಸೋಜ, ಉಪನ್ಯಾಸಕರಾದ ಸ್ಮಿತಾ ಮತ್ತು ನಾಗಲಕ್ಷ್ಮಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕೀರ್ತನ್ ಪ್ರಾರ್ಥನೆ ನೆರವೇರಿಸಿದರು. ವಿದ್ಯಾರ್ಥಿ ಹನುಮಂತ ಸ್ವಾಗತಿಸಿ, ವಿದ್ಯಾರ್ಥಿನಿ ಅಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಅಮೂಲ್ಯ ಅತಿಥಿಗಳನ್ನು ಪರಿಚಯಿಸಿದರು. ಮಿಲ್ಟನ್ ವಂದಿಸಿದರು.




By
ForthFocus™