ಕೋಟ, ಮಾ.22: ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ವೈದ್ಯರ ಸೇವೆ ಬಹುಮುಖ್ಯ. ಅದೇ ರೀತಿ ಆರೋಗ್ಯವಂತ ಸಮಾಜಕ್ಕೆ ಆರೋಗ್ಯ ಶಿಬಿರಗಳು ಅಡಿಗಲ್ಲು ಇದ್ದಂತೆ ಎಂದು ಸಾಸ್ತಾನದ ಸಾಮಾಜಿಕ ಕಾರ್ಯಕರ್ತ ಐರೋಡಿ ವಿಠ್ಠಲ್ ಪೂಜಾರಿ ಹೇಳಿದರು. ಭಾನುವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಸ್ತಾನ ಇಲ್ಲಿ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಸ್ತಾನ, ರೋಟರಿ ಕ್ಲಬ್ ಸಾಸ್ತಾನ – ಹಂಗಾರಕಟ್ಟೆ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಎ.ಜೆ ಆಸ್ಪತ್ರೆ ಮಂಗಳೂರು ಇದರ ಹೃದ್ರೋಗ ತಜ್ಞ ಡಾ.ಅಶೋಕ್ ಉಪಾಧ್ಯಾಯ, ಎಜೆ ಆಸ್ಪತ್ರೆಯ ಪ್ರಮುಖ ವೈದ್ಯರಾದ ಆರತಿ ಎಸ್ ರಾಜ್, ನಿರೀಕ್ಷಾ, ನಿಖಿಲ್ ಉಪಸ್ಥಿತರಿದ್ದರು. ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ರಾಘವೇಂದ್ರ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಫಾರ್ಮಸಿ ಅಧಿಕಾರಿ ಸೀಮಾ ಮ್ಯಾಥ್ಯು ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಮುರುಳೀಧರ ನಾಯರಿ ವಂದಿಸಿದರು.




By
ForthFocus™