ಹಿರಿಯಡಕ, ಫೆ.20: ಸಾಮಾಜಿಕ ಕೇಡುಗಳಿಗೆ ಸಾಹಿತ್ಯ ಮದ್ದಾಗಬೇಕೆಂದೇ ನಂಬಿದ ಜಿ.ಎಸ್.ಎಸ್. ಈ ನೆಲದ ಸಾಮಾನ್ಯರ ಬದುಕಿನ ಸಂಕಟಗಳ ಕಾರಣಗಳನ್ನು ತನ್ನ ಕಾವ್ಯ ಮತ್ತು ಬದುಕಿನಲ್ಲಿ ಎದುರಾದ ಜೀವಪರ ಮನಸ್ಸು ಎಂದು ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಪ್ರವೀಣ ಕುಮಾರ್ ಎಸ್ ಹೇಳಿದರು. ಅವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉಡುಪಿ ಜಿಲ್ಲಾ ಚಕೋರ ವೇದಿಕೆ ಆಯೋಜಿಸಿದ, ಜಿ.ಎಸ್.ಎಸ್. ಸಾಹಿತ್ಯದ ವೈಚಾರಿಕ ನೆಲೆಗಳು ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಸೌಮ್ಯಲತಾ ಪಿ., ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆ ಮತ್ತು ಜಿ.ಎಸ್.ಎಸ್. ಸಾಹಿತ್ಯದ ಆಶಯವನ್ನು ಪರಿಚಯಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಅವರು ಜಿ.ಎಸ್.ಎಸ್. ಅವರ ಸಾಹಿತ್ಯ ಮತ್ತು ಸಂಘಟನಾತ್ಮಕ ಸಾಮರ್ಥ್ಯ ಕನ್ನಡಕ್ಕೆ ನೀಡಿದ ದೇಣಿಗೆ ಅನನ್ಯವಾದುದು ಎಂದರು. ದ್ವಿತೀಯ ಎಂ.ಎ. ಸುರಕ್ಷಾ ಸ್ವಾಗತಿಸಿ, ಸ್ಪರ್ಶಾ ವಂದಿಸಿದ ಕಾರ್ಯಕ್ರಮವನ್ನು ಪ್ರಥಮ ಎಂ.ಎ. ಶ್ರಾವ್ಯ ನಿರೂಪಿಸಿದರು.
ಸಾಮಾಜಿಕ ಕೇಡುಗಳಿಗೆ ಸಾಹಿತ್ಯ ಮದ್ದಾಗಬೇಕು
ಸಾಮಾಜಿಕ ಕೇಡುಗಳಿಗೆ ಸಾಹಿತ್ಯ ಮದ್ದಾಗಬೇಕು
Date:




By
ForthFocus™