Wednesday, March 25, 2026
Wednesday, March 25, 2026

ಮಾದಕ ವ್ಯಸನಕ್ಕೆ ಮೋಹಿತರಾಗಬೇಡಿ: ಡಾ. ಜಯಪ್ರಕಾಶ್‌ ಶೆಟ್ಟಿ

ಮಾದಕ ವ್ಯಸನಕ್ಕೆ ಮೋಹಿತರಾಗಬೇಡಿ: ಡಾ. ಜಯಪ್ರಕಾಶ್‌ ಶೆಟ್ಟಿ

Date:

ಹಿರಿಯಡಕ, ಫೆ.14: ಆರಂಭದ ಕುತೂಹಲ, ಅನಂತರದ ಹಂಬಲ, ಕೊನೆಗೆ ಬಿಟ್ಟಿರಲಾರದ ಚಪಲಕ್ಕೆ ತಳ್ಳಿ ನಿಮ್ಮನ್ನೇ ಆಪೋಶನ ತೆಗೆದುಕೊಳ್ಳುವ ಮಾದಕ ವಸ್ತುಗಳ ಮೋಹದ ಬಲೆಗೆ ಬೀಳದೆ ನಿಮ್ಮ ಬದುಕು ಮತ್ತು ಸಮಾಜವನ್ನು ಕಾಪಾಡುವ ಎಚ್ಚರವನ್ನು ಕಳೆದುಕೊಳ್ಳಬೇಡಿ ಎಂದು ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ್‌ ಶೆಟ್ಟಿ ಹೆಚ್‌ ಹೇಳಿದರು. ಇವರು ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಮಾದಕ ವ್ಯಸನ ತಡೆ ಸಮಿತಿ ಆಯೋಜಿಸಿದ ಮಾದಕ ವ್ಯಸನ ಜಾಗೃತಿ ಉಪನ್ಯಾಸ ಮತ್ತು ಸಾಕ್ಷ್ಯ ಚಿತ್ರ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾದಕ ವ್ಯಸನ ತಡೆ ಸಮಿತಿ ಸಂಚಾಲಕಿ ಅಪರ್ಣ ಕೆ ಯು ಕಾರ್ಯಕ್ರಮವನ್ನು ಸಂಯೋಜಿಸಿ ಸಾಕ್ಷ್ಯಚಿತ್ರದ ಆಶಯವನ್ನು ವಿವರಿಸಿದರು. ಮಾದಕ ವ್ಯಸನದ ದುಷ್ಪರಿಣಾಮಗಳನ್ನು ಕುರಿತಂತೆ ವಿದ್ಯಾರ್ಥಿಗಳಾದ ಈರಬಸು ಕುಂಬಾರ ಮತ್ತು ದಿವ್ಯಶ್ರೀ ಇವರುಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯಲತಾ ಪಿ., ಐಕ್ಯುಎಸಿ ಸಂಚಾಲಕ ಡಾ. ಲಿತಿನ್‌ ಬಿ ಎಂ., ರಾ.ಸೇ.ಯೋಜನಾಧಿಕಾರಿ ನಂದೀಶ್‌ ಕುಮಾರ್‌ ಕೆ ಸಿ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದೇಶಾದ್ಯಂತ ಇಂಧನ ಕೊರತೆ ಇಲ್ಲ: ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ

ನವದೆಹಲಿ, ಮಾ.25: ದೇಶಾದ್ಯಂತ ಇಂಧನ ಕೊರತೆ ಇಲ್ಲ ಎಂದು ಭಾರತ್ ಪೆಟ್ರೋಲಿಯಂ...

ದೇಶವು 26 ಕೋಟಿ ಟನ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ: ಸರ್ಕಾರ

ನವದೆಹಲಿ, ಮಾ.25: ದೇಶವು 26 ಕೋಟಿ ಟನ್ ಕಚ್ಚಾ ತೈಲವನ್ನು ಸಂಸ್ಕರಿಸುವ...

ಕ್ಷಯರೋಗದ ಶಾಶ್ವತ ನಿರ್ಮೂಲನೆಗೆ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿ: ಮನು ಪಟೇಲ್ ಬಿ.ವೈ

ಉಡುಪಿ, ಮಾ.25: ಕ್ಷಯರೋಗವು ಸಾರ್ವಜನಿಕ ಆರೋಗ್ಯ ವಲಯದಲ್ಲಿ ಸವಾಲನ್ನು ಒಡ್ಡುತ್ತಿದ್ದು, ದೇಶದಲ್ಲಿಯೇ...

ಏರ್ಲಪಾಡಿ: ಗಾಳಿ ಮಳೆಗೆ ಮನೆಯ ಮೇಲೆ ಮರ ಬಿದ್ದು ಹಾನಿ

ಉಡುಪಿ, ಮಾ.25: ಮಂಗಳವಾರ ಜಿಲ್ಲೆಯ ಕೆಲವೆಡೆ ಸುರಿದ ಗಾಳಿ ಮಳೆಗೆ ಅಲ್ಲಲ್ಲಿ...
error: Content is protected !!