Thursday, March 26, 2026
Thursday, March 26, 2026

ಯುವಕ ಮಂಡಲ (ರಿ.) ಸಾಣೂರು: ಪರೀಕ್ಷಾ ಪೂರ್ವ ಸಿದ್ಧತೆ ಪ್ರೇರಣಾ ಕಾರ್ಯಕ್ರಮ

ಯುವಕ ಮಂಡಲ (ರಿ.) ಸಾಣೂರು: ಪರೀಕ್ಷಾ ಪೂರ್ವ ಸಿದ್ಧತೆ ಪ್ರೇರಣಾ ಕಾರ್ಯಕ್ರಮ

Date:

ಸಾಣೂರು, ಫೆ.12: ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು, ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ಪ್ರೇರಣಾ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ನಡೆಯಿತು ಜೋಸ್ಸಿ ಕಿರಣ್ ಪಿಂಟೋ ಉದ್ಯಮಿಗಳು ಜೆ ಎಂ. ಜೆ ಎಲೆಕ್ಟ್ರಿಕಲ್ಸ್ ಕಾರ್ಕಳ ಇವರು ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ, ಅಂಕಗಳೇ ಜೀವನವಲ್ಲ ಪರೀಕ್ಷೆಯ ಅಂಕಗಳು ಕಾಗದದ ಮೇಲಿನ ಸಂಖ್ಯೆಗಳಷ್ಟೇ ಅವು ಬುದ್ದಿವಂತಿಕೆ ಅಥವಾ ವ್ಯಕ್ತಿತ್ವವನ್ನು ಅಳೆಯಲಾರವು ಆದ್ದರಿಂದ ಪರೀಕ್ಷೆಯನ್ನು ನಿರ್ಬಿತಿಯಿಂದ ಎದುರಿಸಿ ಆತ್ಮವಿಶ್ವಾಸದ ಮೂಲಕ ಸಾಧನೆ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಾಧವ ಭಂಡಾರ್ಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್. ಆರ್. ಗಿರಿಜಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಕಳ ಶಾಲೆಯ ಮುಖ್ಯ ಶಿಕ್ಷಕರಾದ ಲವೀನಾ ಮೇಲ್ವಿಟಾ ನೋರೋಹ್ನ ನಿವೃತ್ತ ಮುಖ್ಯ ಶಿಕ್ಷಕರಾದ ಬಿ ಪುರುಷೋತ್ತಮ ಗೌಡ ಸಂಪನ್ಮೂಲ ವ್ಯಕ್ತಿಯಾಗಿ ದೇವುದಾಸ್ ನಾಯಕ್, ಆಂಗ್ಲ ಭಾಷಾ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕಾಶಿಪಟ್ನ ಮಂಡಲದ ಅಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಮಂಡಲದ ಮಾಜಿ ಅಧ್ಯಕ್ಷರಾದ ಶಂಕರ್ ಶೆಟ್ಟಿ ಕೊಲ್ದ್ರೊಟ್ಟು ಕಾರ್ಯದರ್ಶಿ ರಾಜೇಶ್, ಸದಸ್ಯರಾದ ಪ್ರಕಾಶ್ ರಾವ್, ಪ್ರಶಾಂತ ಆಚಾರ್ಯ ಭಾಗವಹಿಸಿದ್ದರು. ಲವೀನಾ ಮೇಲ್ವಿಟಾ ನೋರೋಹ್ನ ಪ್ರಸ್ತಾವನೆಗೈದರು. ಗುರುಪ್ರಸಾದ್ ಶೆಟ್ಟಿ ಸ್ವಾಗತಿಸಿ ಶಿಕ್ಷಕ ಪಾಟೀಲ್ ನಿರೂಪಿಸಿ ಕಾರ್ಯದರ್ಶಿ ರಾಜೇಶ್ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜ್ಞಾನ ವ್ಯಕ್ತಪಡಿಸುವ ಶೈಲಿಯನ್ನು ವಿದ್ಯಾರ್ಥಿಗಳು ಕರಗತ ಮಾಡಿಕೊಂಡರೆ ಮಾತ್ರ ಸಂದರ್ಶನಗಳಲ್ಲಿ ಯಶಸ್ಸು ಗಳಿಸಲು ಸಾಧ್ಯ: ಡಾ. ಗಣೇಶ್ ಪ್ರಸಾದ್ ಜಿ. ನಾಯಕ್

ಬಸ್ರೂರು, ಮಾ.26: ಸಂವಹನ ಕೌಶಲ್ಯಗಳನ್ನು ಚಿಕ್ಕ ವಯಸ್ಸಿನಿಂದಲೇ ಮೈಗೂಡಿಸಿಕೊಂಡರೆ ವಿದ್ಯಾರ್ಥಿ ಜೀವನದಲ್ಲಿ...

ದೇಶಾದ್ಯಂತ ಇಂಧನ ಕೊರತೆ ಇಲ್ಲ: ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ

ನವದೆಹಲಿ, ಮಾ.25: ದೇಶಾದ್ಯಂತ ಇಂಧನ ಕೊರತೆ ಇಲ್ಲ ಎಂದು ಭಾರತ್ ಪೆಟ್ರೋಲಿಯಂ...

ದೇಶವು 26 ಕೋಟಿ ಟನ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ: ಸರ್ಕಾರ

ನವದೆಹಲಿ, ಮಾ.25: ದೇಶವು 26 ಕೋಟಿ ಟನ್ ಕಚ್ಚಾ ತೈಲವನ್ನು ಸಂಸ್ಕರಿಸುವ...

ಕ್ಷಯರೋಗದ ಶಾಶ್ವತ ನಿರ್ಮೂಲನೆಗೆ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿ: ಮನು ಪಟೇಲ್ ಬಿ.ವೈ

ಉಡುಪಿ, ಮಾ.25: ಕ್ಷಯರೋಗವು ಸಾರ್ವಜನಿಕ ಆರೋಗ್ಯ ವಲಯದಲ್ಲಿ ಸವಾಲನ್ನು ಒಡ್ಡುತ್ತಿದ್ದು, ದೇಶದಲ್ಲಿಯೇ...
error: Content is protected !!