ಕಾಪು, ಫೆ.10: ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಂಜ ಬಳಿ 8 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಲುಸಂಕ ನಿರ್ಮಾಣಗೊಳ್ಳಲಿದ್ದು, ಕಾಮಗಾರಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು. ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ಧನ ಆಚಾರ್ಯ, ಸದಸ್ಯರಾದ ಗಣೇಶ್ ಶೆಟ್ಟಿ ಪೈಯಾರು, ಲತಾ ಆಚಾರ್ಯ, ಇವ್ಜಿನ್ ಲೋಬೋ ಶಾಂಭವಿ ಕುಲಾಲ್, ಸ್ಟಾನ್ಲಿ ಕೋಡ್ದಾ, ಮಾಜಿ ಸದಸ್ಯರಾದ ರೇಖಾ ಕುಲಾಲ್, ಸ್ಥಳೀಯರಾದ ರವಿ ಶೆಟ್ಟಿ, ಉದಯ ಕುಲಾಲ್, ಯಾದಲ್ ಕುಲಾಲ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕುತ್ಯಾರು: ಕಾಲುಸಂಕ ಕಾಮಗಾರಿಗೆ ಗುದ್ದಲಿ ಪೂಜೆ
ಕುತ್ಯಾರು: ಕಾಲುಸಂಕ ಕಾಮಗಾರಿಗೆ ಗುದ್ದಲಿ ಪೂಜೆ
Date:




By
ForthFocus™