Wednesday, March 4, 2026
Wednesday, March 4, 2026

ಕಾರ್ಕಡ ಗೆಳೆಯರ ಬಳಗ: ಸಾಧಕರಿಗೆ ಸನ್ಮಾನ

ಕಾರ್ಕಡ ಗೆಳೆಯರ ಬಳಗ: ಸಾಧಕರಿಗೆ ಸನ್ಮಾನ

Date:

ಕೋಟ, ಫೆ.8: ಕಾರ್ಕಡ ಗೆಳೆಯರ ಬಳಗ ಇದರ ೩೮ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ದತ್ತಿನಿಧಿ ವಿತರಣೆ ಸನ್ಮಾನ, ವಿಕಲಚೇತನ ಸಹಾಯ ನಿಧಿ ವಿತರಣೆ , ಮತ್ತು ಅಶಕ್ತರ ಸಹಾಯನಿಧಿ ವಿತರಣೆ ಕಾರ್ಯಕ್ರಮ ಫೆ.೭ರ ಶನಿವಾರ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲಾ ಪಾರ್ವತಿ ಹೊಳ್ಳ ರಂಗ ಮಂಟಪದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ . ತಾರಾನಾಥ ಹೊಳ್ಳ ವಹಿಸಿದ್ದರು. ಯಕ್ಷಗಾನ ಕಲಾವಿದ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಕೋಟ ಸುರೇಶ ಬಂಗೇರ, ವಿವೇಕ ಬಲಕಿಯರ ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಕೆ. ಜಗದೀಶ ಹೊಳ್ಳ ಕಾರ್ಕಡ, ನ್ಯೂಕಾರ್ಕಡ ಶಾಲಾ ಮುಖ್ಯೋಪಾಧ್ಯ ಎನ್. ಪ್ರಭಾಕರ ಕಾಮತ್, ಹಾಗೂ ನಿವೃತ್ತ ಅಧ್ಯಾಪಕ ಕೆ.ನಾರಾಯಣ ಆಚಾರ್ಯ, ಹವ್ಯಾಸಿ ಯಕ್ಷಗಾನ ಕಲಾವಿದ ಕೆ. ಐತ ಮತ್ತು ಮಹಾಪೋಷಕ ವಿಘ್ನರಾಜ ಭಟ್ಟ ಇವರುಗಳನ್ನು ಸನ್ಮಾನಿಸಲಾಯಿತು.

ಸಾಲಿಗ್ರಾಮದ ಹೊಸ ಬದುಕು ಆಶ್ರಮಕ್ಕೆ ಧನ ಸಹಾಯ ಪರಿಕರವನ್ನು ಉದ್ಯಮಿ ಕಿದಿಯೂರು ಉದಯಕುಮಾರ್ ಶೆಟ್ಟಿ ಆಶ್ರಮದ ಮುಖ್ಯಸ್ಥ ವಿನಯಚಂದ್ರ ಸಾಸ್ತಾನ ಇವರಿಗೆ ಹಸ್ತಾಂತರಿಸಿದರು. ಬಳಗದ ವಿದ್ಯಾನಿಧಿ ದತ್ತಿ ನಿಧಿಯನ್ನು ಕೋಟ ಸಿಎ ಬ್ಯಾಂಕ್ ಉಪಾಧ್ಯಕ್ಷ ಎಚ್ ನಾಗರಾಜ ಹಂದೆ ವಿತರಿಸಿ ಬಳಗದ 38 ವರ್ಷದ ಸಾಧನೆಯನ್ನು ಶ್ಲಾಘಿಸಿದರು.

ಅಶಕ್ತರ ಸಹಾಯ ನಿಧಿಯನ್ನು ನಿವೃತ್ತ ಅಂಚೆ ಅಧಿಕಾರಿ ಪಿ. ಸದಾಶಿವ ಮಧ್ಯಸ್ಥ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ರಾಜು ಪೂಜಾರಿ ಸಮ್ಮುಖದಲ್ಲಿ 40 ಸಾವಿರ ರೂಗಳನ್ನು ತಲಾ 8 ಜನರಿಗೆ ವಿತರಿಸಿದರು. ವಿಕಲಚೇತನರ ಸಹಾಯ ನಿಧಿಯನ್ನು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಶಿಕ್ಷಣದಲ್ಲಿ ವಿಶೇಷ ಸಾಧನೆಗೈದ ಪ್ರತಿಭೆಗಳಾದ ನಿಧಿ ಪೈ, ಹಾಗೂ ನಿಧೀಶಭಟ್ಟ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಅದ್ವೆತ್ ಉಪಾಧ್ಯ ಇವರುಗಳಿಗೆ ವಿಶೇಷ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಬಹುಮಾನವನ್ನು ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಣೈ ವಿತರಿಸಿದರು.

ಮುಖ್ಯ ಅಭ್ಯಾಗತರಾಗಿ ಕಾರ್ಕಡ ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ದತ್ತಿನಿಧಿ ಪಟ್ಟಿ ವಾಚಿಸಿದರು. ಬಳಗದ ಕಾರ್ಯದರ್ಶಿ ಕೆ.ನಾಗರಾಜ ಉಪಾಧ್ಯ ವಾರ್ಷಿಕ ವರದಿ ವಾಚಿಸಿ ದರು.ಕೆ. ಜಗದೀಶ ಆಚಾರ್ಯ ವಂದಿಸಿದರು. ಸನ್ಮಾನ ಪತ್ರ ಹಾಗೂ ಪ್ರತಿಭಾ ಪುರಸ್ಕಾರ ಪತ್ರವನ್ನು ನಾಗಾರಾಜ ಉಪಾಧ್ಯ, ಕೆ. ಶ್ರೀಕಾಂತ್ ಐತಾಳ, ಕೆ. ಶೀನ ಹಾಗೂ ಕೆ.ಶೇಖರ ವಾಚಿಸಿದರು.

ಬಳಗದ ಕೆ ಶ್ರೀಪತಿ ಆಚಾರ್ಯ, ಕೆ. ತಮ್ಮಯ್ಯ, ಕೆ. ರಾಘವೇಂದ್ರ, ಕೆ. ಉದಯ ಐತಾಳ, ಕೆ. ರಘು ಭಂಡಾರಿ ಸಹಕರಿಸಿದರು. ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ ಸಭಾ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾಂತ ನಾಯರಿ, ಕೆ. ಜಗದೀಶ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ನಂತರ ಸ್ಥಳೀಯ ಅಂಗನವಾಡಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಗಾನ ಮತ್ತುನೃತ್ಯ ವೈವಿದ್ಯ ಹಾಗೂ ಕಲಾ ಚಂದನ, ಬೀಜಾಡಿ, ಹವ್ಯಾಸಿ ತಂಡದವರ ಹಾಸ್ಯಮಯ ನಗೆನಾಟಕ ಜನಮನ ರಂಜಿಸಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಕ್ಕಟ್ಟು: ಉಡುಪಿ ಜಿಲ್ಲೆಯ ಪ್ರಯಾಣಿಕರ ನೆರವಿಗಾಗಿ ಸಹಾಯವಾಣಿ

ಉಡುಪಿ, ಮಾ.2: ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಪ್ರಚಲಿತದಲ್ಲಿರುವ ಅಸ್ಥಿರ ಪರಿಸ್ಥಿತಿಯಿಂದಾಗಿ ಅಂತರಾಷ್ಟ್ರೀಯ...

ಯೋಜನಾ ವರದಿ ಕಾರ್ಯಾಗಾರ

ಹಿರಿಯಡಕ, ಮಾ.2: ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ರಾಜ್ಯಶಾಸ್ತ್ರ ವಿಭಾಗದ...
error: Content is protected !!