Friday, March 27, 2026
Friday, March 27, 2026

ಯುವ ಭಾರತ ನಿರ್ಮಾಣಕ್ಕೆ ಮುನ್ನಡಿ ಬರೆದ ಬಜೆಟ್: ಯಶ್ಪಾಲ್ ಸುವರ್ಣ

ಯುವ ಭಾರತ ನಿರ್ಮಾಣಕ್ಕೆ ಮುನ್ನಡಿ ಬರೆದ ಬಜೆಟ್: ಯಶ್ಪಾಲ್ ಸುವರ್ಣ

Date:

ಉಡುಪಿ, ಫೆ.1: ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ತಮ್ಮ 9 ನೇ ಬಜೆಟ್ ಮಂಡಿಸಿದ್ದು, ದೇಶದ ಆರ್ಥಿಕ ವ್ಯವಸ್ಥೆಗೆ ಹೊಸ ಚೈತನ್ಯ ನೀಡುವ ಮೂಲಕ ವಿಕಸಿತ ಭಾರತಕ್ಕೆ ಪೂರಕವಾಗಿ ಯುವ ಭಾರತ ನಿರ್ಮಾಣಕ್ಕೆ ಈ ಬಜೆಟ್ ಮುನ್ನುಡಿ ಬರೆಯಲಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ. ದೇಶಾದ್ಯಂತ ಏಳು ಹೈಸ್ಪೀಡ್ ರೈಲು ಕಾರಿಡಾರ್ ಗಳ ಅಭಿವೃದ್ಧಿ, ರಕ್ಷಣಾ ವಲಯಕ್ಕೆ ವಿಶೇಷ ಆದ್ಯತೆ, ಯುವ ಜನತೆಗೆ ಉದ್ಯೋಗ ಸೃಷ್ಟಿಗಾಗಿ ಐಟಿ ಸಂಸ್ಥೆಗಳಿಗೆ ಪ್ರೋತ್ಸಾಹ, 16ನೇ ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ ಗರಿಷ್ಠ ಅನುದಾನ, ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ “ಶಿ ಮಾರ್ಟ್” ಯೋಜನೆ, ಎಲ್ಲಾ ರಾಜ್ಯಗಳಿಗೆ ಯೂನಿವರ್ಸಿಟಿ ಟೌನ್ ಶಿಪ್ ಜೊತೆಗೆ ವಿದ್ಯಾರ್ಥಿನಿಲಯಗಳ ನಿರ್ಮಾಣಕ್ಕೆ ಆದ್ಯತೆ, ಕೃಷಿ, ಮೀನುಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಮಹತ್ವ ನೀಡುವ ಕಾರ್ಯಕ್ರಮಗಳನ್ನು ಬಜೆಟ್ ಒಳಗೊಂಡಿರುವುದು ದೇಶದ ಜನತೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ವಿಶ್ವದ ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತವನ್ನು ತೃತೀಯ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೋಟೇಶ್ವರ ಕಾಲೇಜು: ಕಾರ್ಯಾಗಾರ

ಕುಂದಾಪುರ, ಮಾ.27: ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು...

ಎನ್‌ಬಿಟಿಸಿ ಮತ್ತು ಕೆಎಂಸಿ ಮಣಿಪಾಲ: ರಾಷ್ಟ್ರೀಯ ಕಾರ್ಯಾಗಾರ

ಮಣಿಪಾಲ, ಮಾ.27: ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿ (ಎನ್‌ಬಿಟಿಸಿ), ಆರೋಗ್ಯ ಸೇವೆಗಳ...

ಆಹಾರ ಸುರಕ್ಷತಾ ಕ್ರಮಗಳ ಜಾಗ್ರತಿ ಅತೀ ಅಗತ್ಯ: ಡಾ. ಶರತ್ ಕೆ. ರಾವ್

ಉಡುಪಿ, ಮಾ.27: ಆಹಾರ ಮತ್ತು ನೈರ್ಮಲ್ಯ ಮೇಲ್ವಿಚಾರಣಾ ಸಮಿತಿ, ಮಣಿಪಾಲ ಅಕಾಡೆಮಿ...
error: Content is protected !!