Wednesday, March 4, 2026
Wednesday, March 4, 2026

ಜನಮನ ಗೆದ್ದ ರಾಮಾಯಣ ಕಥೆ ಆಧಾರಿತ ‘ಆಭಾ’ ನೃತ್ಯ ಕಾರ್ಯಕ್ರಮ

ಜನಮನ ಗೆದ್ದ ರಾಮಾಯಣ ಕಥೆ ಆಧಾರಿತ ‘ಆಭಾ’ ನೃತ್ಯ ಕಾರ್ಯಕ್ರಮ

Date:

ಉಡುಪಿ, ಜ.22: ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ನಿಮಿತ್ತ ರಾಜಾಂಗಣದಲ್ಲಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಗುರುವಾರ ರಾತ್ರಿ ರಾಮಾಯಣ ಕಥೆ ಆಧಾರಿತ ‘ಆಭಾ’ ನೃತ್ಯ ಕಾರ್ಯಕ್ರಮ ನಡೆಯಿತು. ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು. ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ ಉಪಸ್ಥಿತರಿದ್ದರು.

ಖ್ಯಾತ ನೃತ್ಯಗುರು ಬೆಂಗಳೂರಿನ ಪಾರ್ಶ್ವನಾಥ ಉಪಾಧ್ಯೆ ಹಾಗೂ ಸಹ ಕಲಾವಿದರಾದ ಶ್ರುತಿ ಗೋಪಾಲ್, ಆದಿತ್ಯ ಪಿ.ವಿ. ಮನೋಜ್ಞವಾಗಿ ಪ್ರದರ್ಶಿಸಿದರು. ಹಾಡುಗಾರಿಕೆಯಲ್ಲಿ ರೋಹಿತ್ ಭಟ್ ಉಪ್ಪೂರು, ಮೃದಂಗದಲ್ಲಿ ಹರ್ಷ ಸಾಮಗ ಮಲ್ಪೆ, ವಯೋಲಿನ್ ನಲ್ಲಿ ಪ್ರಾದೇಶ್ ಆಚಾರ್, ಕೊಳಲಿನಲ್ಲಿ ಮಹೇಶ್ ಸ್ವಾಮಿ, ತಾಳದಲ್ಲಿ ಶೋಭಿತ್ ರಮೇಶ್ ಅವರು ವಾದ್ಯ ಸಹಕಾರ ನೀಡಿದರು. ನೃತ್ಯಗುರು ಸುಧೀರ್ ಕೊಡವೂರು ಸ್ವಾಗತಿಸಿ ಪರಿಚಯಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಕ್ಕಟ್ಟು: ಉಡುಪಿ ಜಿಲ್ಲೆಯ ಪ್ರಯಾಣಿಕರ ನೆರವಿಗಾಗಿ ಸಹಾಯವಾಣಿ

ಉಡುಪಿ, ಮಾ.2: ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಪ್ರಚಲಿತದಲ್ಲಿರುವ ಅಸ್ಥಿರ ಪರಿಸ್ಥಿತಿಯಿಂದಾಗಿ ಅಂತರಾಷ್ಟ್ರೀಯ...

ಯೋಜನಾ ವರದಿ ಕಾರ್ಯಾಗಾರ

ಹಿರಿಯಡಕ, ಮಾ.2: ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ರಾಜ್ಯಶಾಸ್ತ್ರ ವಿಭಾಗದ...
error: Content is protected !!