Tuesday, March 31, 2026
Tuesday, March 31, 2026

ಕ್ರೀಡಾ ಶಾಲೆ/ನಿಲಯ ಪ್ರವೇಶಾತಿ: ಕ್ರೀಡಾಪಟುಗಳ ಆಯ್ಕೆ

ಕ್ರೀಡಾ ಶಾಲೆ/ನಿಲಯ ಪ್ರವೇಶಾತಿ: ಕ್ರೀಡಾಪಟುಗಳ ಆಯ್ಕೆ

Date:

ಉಡುಪಿ, ಜ.18: 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಜೂನ್-1 ನೇ ತಾರೀಕಿನಿಂದ 8 ನೇ ತರಗತಿ ಪ್ರವೇಶಕ್ಕೆ ಅರ್ಹತೆ ಹೊಂದುವ 14 ವರ್ಷದೊಳಗಿನ ಬಾಲಕ/ಬಾಲಕಿಯರನ್ನು ಕ್ರೀಡಾ ವಸತಿ ಶಾಲೆ/ನಿಲಯ ಪ್ರವೇಶಕ್ಕೆ ಆಯ್ಕೆ ಮಾಡಲಾಗುತ್ತಿದ್ದು, ಜನವರಿ 21 ರಂದು ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕ್ರೀಡಾಪಟುಗಳಿಗೆ ಬೆಳಿಗ್ಗೆ 10.00 ಗಂಟೆಗೆ ಕುಂದಾಪುರ ಗಾಂಧಿ ಮೈದಾನ, ಜನವರಿ 22 ರಂದು ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಕ್ರೀಡಾಪಟುಗಳಿಗೆ ಬೆಳಿಗ್ಗೆ

10.00 ಗಂಟೆಗೆ ಮುನಿಯಾಲು ಕೆಪಿಎಸ್ ಹಾಗೂ ಜನವರಿ 23 ರಂದು ಕಾಪು, ಉಡುಪಿ ಹಾಗೂ ಬ್ರಹ್ಮಾವರ ತಾಲೂಕಿನ ಕ್ರೀಡಾಪಟುಗಳಿಗೆ ಬೆಳಿಗ್ಗೆ 10.00 ಗಂಟೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ವಿಬಾಗದ ಕ್ರೀಡಾ ವಸತಿ ನಿಲಯ ಪ್ರವೇಶಕ್ಕೆ 18 ವರ್ಷ ವಯೋಮಿತಿಯೊಳಗಿನ ಪ್ರಥಮ ಪಿಯುಸಿ ಸೇರಲು ಅರ್ಹರಾಗಿರುವ ಆಸಕ್ತ ಕ್ರೀಡಾಪಟುಗಳು ನೇರ ಆಯ್ಕೆಗಾಗಿ ನಿಗದಿತ ನಮೂನೆಯಲ್ಲಿ ವೈದ್ಯಕೀಯ ಪ್ರಮಾಣಪತ್ರ ಹಾಗೂ ದೃಧೀಕರಿಸಿದ ಜನನ ಪ್ರಮಾಣಪತ್ರದೊಂದಿಗೆ ಅರ್ಜಿಯನ್ನು ಆಯ್ಕೆ ಪ್ರಕ್ರಿಯೆ ನಡೆಯುವ ಸ್ಥಳದಲ್ಲಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣ, ಅಜ್ಜರಕಾಡು, ದೂ.ಸಂ:0820-2521324 ಅಥವಾ ರಾಜೇಶ್ ಪತ್ತಾರ್ ದೂ. ಸಂ: 9241249233 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಿ.ಬಿ. ಹೆಗ್ಡೆ ಕಾಲೇಜು: ‘ಪ್ಲಾಸ್ಟಿಕಾಸುರ’ ಯಕ್ಷಗಾನ

ಕುಂದಾಪುರ, ಮಾ.30: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಕುವೈತ್‌: ವಿದ್ಯುತ್ ಘಟದ ಮೇಲೆ ಇರಾನ್ ದಾಳಿ; ಭಾರತೀಯ ಕಾರ್ಮಿಕ ಬಲಿ

ಕುವೈತ್ ನಗರ, ಮಾ.30: ಕುವೈತ್ ಸಚಿವಾಲಯದ ಅಧಿಕೃತ ವಕ್ತಾರರು ನೀಡಿದ ಹೇಳಿಕೆಯ...

ಮಾಹೆಯ ಬಿಎಸ್‌ಎಲ್‌-3 ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಮಾನ್ಯತೆ

ಮಣಿಪಾಲ, ಮಾ.30: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ...
error: Content is protected !!