Saturday, March 21, 2026
Saturday, March 21, 2026

ರ‍್ಯಾಂಪ್ ಯೋಜನೆಯಡಿ ಇನ್‌ಕ್ಯೂಬೇಷನ್ ಜಾಗೃತಿ ಕಾರ್ಯಕ್ರಮ

ರ‍್ಯಾಂಪ್ ಯೋಜನೆಯಡಿ ಇನ್‌ಕ್ಯೂಬೇಷನ್ ಜಾಗೃತಿ ಕಾರ್ಯಕ್ರಮ

Date:

ಉಡುಪಿ, ಡಿ.18: ಎಐಸಿ ನಿಟ್ಟೆ ಇನ್‌ಕ್ಯೂಬೇಷನ್ ಸೆಂಟರ್ ನಿಟ್ಟೆ, ಎನ್.ಎಂ.ಎ.ಎಂ ಇನ್ಸಿಟ್ಯೂಟ್ ಆಫ್ ಟೆಕ್ನಾಲಾಜಿ ನಿಟ್ಟೆ, ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಹಾಗೂ ಕರ್ನಾಟಕ ತಾಂತ್ರಿಕ ಸಲಹಾ ಸೇವೆಗಳ ಸಂಸ್ಥೆ ಸಹಯೋಗದಲ್ಲಿ ಇತ್ತೀಚೆಗೆ ಕಾರ್ಕಳದ ನಿಟ್ಟೆ ಎನ್.ಎಂ.ಎ.ಎಂ ಇನ್ಸಿಟ್ಯೂಟ್ ಆಫ್ ಟೆಕ್ನಾಲಾಜಿ ಇಲ್ಲಿ ಕೇಂದ್ರ ಸರ್ಕಾರದ ರ‍್ಯಾಂಪ್ ಯೋಜನೆಯಡಿಯಲ್ಲಿ ಏರ್ಪಡಿಸಿದ ಇನ್‌ಕ್ಯೂಬೇಷನ್ ಜಾಗೃತಿ ಕಾರ್ಯಕ್ರಮ ಎಂ.ಎಸ್.ಎಂ.ಇ – ಡಿಎಫ್‌ಒ ಪ್ರಭಾರ ಜಂಟಿ ನಿರ್ದೇಶಕ ಸುಂದರ್ ಶೇರಿಗಾರ್ ಉದ್ಘಾಟಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಸೀತಾರಾಮ ಶೆಟ್ಟಿ ಉದ್ಯಮಶೀಲತೆಯ ಮಹತ್ವವನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ವಿ. ನಾಯಕ್ ವಾಣಿಜ್ಯೋದ್ಯಮದ ಪ್ರಾಮುಖ್ಯತೆಯನ್ನು ತಿಳಿಸಿದರು. ಚಾರ್ಟರ್ ಅಕೌಂಟೆಟ್ ಎಸ್.ಎಸ್ ನಾಯಕ್ ಹಾಗೂ ಆರ್.ಕೆ ಬಾಲಚಂದ್ರ ಎಂ.ಎಸ್.ಎಂ.ಇ ಯೋಜನೆಗಳು ಹಾಗೂ ಉದ್ಯಮ ಶೀಲತೆ ಕುರಿತು ಮಾಹಿತಿ ನೀಡಿದರು. ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಸಹಾಯಕ ಸಂಚಾಲಕ ಅರವಿಂದ್ ಬಾಳೇರಿ, ಇನ್‌ಕ್ಯೂಬೇಷನ್ ಮ್ಯಾನೇಜರ್ ಪುನೀತ್ ರೈ, ಪ್ಯಾಬ್ ಲ್ಯಾಬ್ ಕಾರ್ಡಿನೇಟರ್ ಆದರ್ಶ ಹೆಗ್ಡೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಡಾ. ಎ.ಪಿ. ಆಚಾರ್ ಸ್ವಾಗತಿಸಿ, ದೀಕ್ಷಾ ಶೆಟ್ಟಿ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮ್ಯಾಜಿಕ್ ಜಾರ್

ನಾವೆಲ್ಲ ದಿನಾಲು ಅನೇಕ ಋಣಾತ್ಮಕ ಭಾವನೆಗಳಿಂದ ತೋಲಾಡುತ್ತಿರುತ್ತೇವೆ. ಭಾರವಾದ ಮನಸ್ಸು, ಕೆಲಸದಲ್ಲಿ...

ತೆಂಕನಿಡಿಯೂರು ಕಾಲೇಜು: ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿನಿಗೆ ಪ್ರಥಮ ರ‍್ಯಾಂಕ್‌

ಉಡುಪಿ, ಮಾ.21: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...

ಕತಾರ್ ದೊರೆಗೆ ಈದ್ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ನವದೆಹಲಿ, ಮಾ.20: ಪ್ರಧಾನಿ ನರೇಂದ್ರ ಮೋದಿ ಕತಾರ್ ದೊರೆ ಶೇಖ್ ತಮೀಮ್...

ಇಸ್ರೇಲ್‌ನ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಕ್ಷಿಪಣಿ ದಾಳಿ

ಯು.ಬಿ.ಎನ್.ಡಿ., ಮಾ.20: ಹೈಫಾದ ಉತ್ತರ ನಗರದಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ಇರಾನಿನ...
error: Content is protected !!