Monday, March 30, 2026
Monday, March 30, 2026

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಶರನ್ನವರಾತ್ರಿ ಮಹೋತ್ಸವ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಶರನ್ನವರಾತ್ರಿ ಮಹೋತ್ಸವ

Date:

ಕಾಪು, ಸೆ.19: ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ 11 ದಿನಗಳ ಪರ್ಯಂತ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವ ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ಜ್ಯೋತಿಷ್ಯ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿಗಳ ಹಾಗೂ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಇವರ ಸಹಯೋಗದೊಂದಿಗೆ ಅತ್ಯಂತ ವಿಜ್ರಂಭಣೆಯಿಂದ ನಡೆಯಲಿದೆ.

ಸೆಪ್ಟೆಂಬರ್ 22ರಂದು ಬೆಳಿಗ್ಗೆ 8:30ಕ್ಕೆ ಸರಿಯಾಗಿ ಶರನ್ನವರಾತ್ರಿ ಮಹೋತ್ಸವದ ಉದ್ಘಾಟನೆಯನ್ನು 9 ಜನ ಗಣ್ಯ ಮಹಿಳೆಯರು ಮಾಡಲಿದ್ದಾರೆ. ಕಾಪು ಕ್ಷೇತ್ರ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ಭಕ್ತರು ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಎಲ್ಲೆಡೆಯೂ 9 ದೀಪಗಳನ್ನು ಬೆಳಗುವ ಮುಖೇನ ಕಾಪುವಿನ ಅಮ್ಮನ ಸಾನಿಧ್ಯ ಬೆಳಗಿದೆ. ಹಾಗಾಗಿ ಈ ಬಾರಿಯ ನವರಾತ್ರಿಯಲ್ಲಿ 9 ದೀಪಗಳನ್ನು ಬೆಳಗುವ ಮುಖೇನ ಉದ್ಘಾಟನಾ ಸಮಾರಂಭ ನಡೆಯಲಿದೆ.

ಸೆಪ್ಟೆಂಬರ್ 30ರ ಮಂಗಳವಾರ ಪೂರ್ವಾಹ್ನ 11:30ಕ್ಕೆ ಚಂಡಿಕಾಯಾಗ ಪೂರ್ಣಾಹುತಿ ತದನಂತರ ಮಹಾ ಅನ್ನಸಂತರ್ಪಣೆ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಜರಗಲಿದೆ. ಸಂಜೆ 4.00 ರಿಂದ ದೇವೀ ದರ್ಶನ ಮತ್ತು ಕೆಂಡಸೇವೆ, ಸಾಮೂಹಿಕ ಚಂಡಿಕಾಯಾಗದಲ್ಲಿ ಭಾಗಿಯಾಗುವ ಭಕ್ತರು ಸೇವಾ ಸಂಕಲ್ಪವನ್ನು ಮಾಡಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಅದೇ ದಿನ ಬೆಳಿಗ್ಗೆ 10.00 ರಿಂದ ಶ್ರೀದೇವಿಗೆ ಹರಕೆಯಾಗಿ ಬಂದಿರುವ ಸೀರೆಗಳನ್ನು ದೇವಳದ ಪ್ರಾಂಗಣದಲ್ಲಿ ಏಲಂ ಮಾಡಲಾಗುವುದು.

ಅಕ್ಟೋಬರ್ 1 ರಂದು ಬೆಳಿಗ್ಗೆ 8:00 ಗಂಟೆಯಿಂದ ನವದುರ್ಗಾ ಲೇಖನ ಸಂಕಲ್ಪ, ಪುಸ್ತಕಸ್ಥ ವಾಗ್ದೇವತಾಪೂಜನಮ್ ನಡೆಯಲಿದ್ದು, ಈಗಾಗಲೇ ಪುಸ್ತಕ ಬರೆದವರು ಈ ಪೂಜೆಯಲ್ಲಿ ಭಾಗಿಯಾಗಬೇಕೆಂದು ನವದುರ್ಗಾ ಲೇಖನ ಯಜ್ಞ ಸಮಿತಿ ತಿಳಿಸಿದೆ. ಅದೇ ದಿನ ಸಂಜೆ 5:30 ರಿಂದ ಶ್ರೀದೇವೀ ದುರ್ಗಾ ನಮಸ್ಕಾರ ಪೂಜಾ ನಡೆಯಲಿದೆ. ಭಕ್ತರು ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆಯಲ್ಲಿ ಭಾಗಿಯಾಗಲು ಅವಕಾಶವಿದೆ. ಶರನ್ನವರಾತ್ರಿಯ ಎಲ್ಲಾ ದಿನಗಳಲ್ಲೂ ಶ್ರೀದೇವಿಗೆ ಕಲ್ಫೋಕ್ತ ಪೂಜೆ ನಡೆಯುತ್ತದೆ. ಸಂಜೆ ಗಂಟೆ 5:30 ರಿಂದ 7.00 ರವರೆಗೆ ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ. ತದನಂತರ ಸಂಜೆ ಗಂಟೆ 7:00 ರಿಂದ ಸಾಂಸ್ಕೃತಿಕ ವೈಭವದ ಮೆರುಗನ್ನು ನೀಡಲು ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಪ್ರದರ್ಶನ.

ನವರಾತ್ರಿಯ ಎಲ್ಲಾ ದಿನಗಳಲ್ಲೂ ಭಕ್ತರಿಗೆ ಬೆಳಿಗ್ಗೆ ಗಂಟೆ 9:00 ರಿಂದ ಸಂಜೆ ಗಂಟೆ 6.00ರ ವರೆಗೆ ಘಂಟಾನಾದ ಸೇವೆಯನ್ನು ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ. ಅ ಪ್ರಯುಕ್ತ ಭಕ್ತರು ಸನ್ನಿದಾನದಲ್ಲಿ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಉಚ್ಚಂಗಿ ಸಹಿತ ಕಾಪು ಶ್ರೀ ಮಾರಿಯಮ್ಮನ ಕೃಪೆಗೆ ಪಾತ್ರರಾಗಬೇಕೆಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಕಾರ್ಯನಿರ್ವಹಣಾಧಿಕಾರಿ ಹಾಗೂ ಅಭಿವೃದ್ಧಿಯ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುವೈತ್‌: ವಿದ್ಯುತ್ ಘಟದ ಮೇಲೆ ಇರಾನ್ ದಾಳಿ; ಭಾರತೀಯ ಕಾರ್ಮಿಕ ಬಲಿ

ಕುವೈತ್ ನಗರ, ಮಾ.30: ಕುವೈತ್ ಸಚಿವಾಲಯದ ಅಧಿಕೃತ ವಕ್ತಾರರು ನೀಡಿದ ಹೇಳಿಕೆಯ...

ಮಾಹೆಯ ಬಿಎಸ್‌ಎಲ್‌-3 ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಮಾನ್ಯತೆ

ಮಣಿಪಾಲ, ಮಾ.30: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ...

ಯಕ್ಷಗಾನ ಕಲಾರಂಗ (ರಿ.) ಉಡುಪಿ: ‘ನಂದಾದೀಪ’ ಮನೆಯ ಉದ್ಘಾಟನೆ

ಉಡುಪಿ, ಮಾ.30: ಯಕ್ಷಗಾನ ಕಲಾರಂಗ (ರಿ.) ಉಡುಪಿ ಇದರ ವತಿಯಿಂದ ವಿದ್ಯಾಪೋಷಕ್...
error: Content is protected !!