Saturday, October 3, 2026
Saturday, October 3, 2026

ಮಹಿಳಾ ದಿನಾಚರಣೆ

ಮಹಿಳಾ ದಿನಾಚರಣೆ

Date:

ಶಂಕರನಾರಾಯಣ, ಮಾ.25: ಶ್ರೀಶ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಶಂಕರನಾರಾಯಣ ಹಾಗೂ ಗ್ರಾಮ ಪಂಚಾಯತ್ ಶಂಕರನಾರಾಯಣ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಯಿತು. ಗ್ರಾಮ ಪಂಚಾಯತ್ ಶಂಕರನಾರಾಯಣ ಅಧ್ಯಕ್ಷರಾದ ಶಂಕರನಾರಯಣ ಭಟ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಗಿ ಹೊಸೂರು ಮೂಕಾಂಬಿಕಾ ಪ್ರೌಢ ಶಾಲಾ ಶಿಕ್ಷಕಿ ಕೀರ್ತನಾ ಉಮೇಶ್ ಶೆಟ್ಟಿ ಕಾನೂನು ಅರಿವಿನ ಕುರಿತು ಮಾಹಿತಿ ನೀಡಿದರು. ಶ್ರೀಶ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದಲ್ಲಿ ಸೇವೆ ಸಲ್ಲಿಸಿದ ಹಿಂದಿನ ಅಧ್ಯಕ್ಷರಾದ ಕುಸುಮಾ ಶೆಟ್ಟಿ, ಉಪಾಧ್ಯಕ್ಷರಾದ ಲಕ್ಷ್ಮೀ ಕುಲಾಲ, ಕಾರ್ಯದರ್ಶಿ ಶಾಲಿನಿ, ಕೋಶಾಧಿಕಾರಿ ಸವಿತಾ ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪ ಡಿ ನಾಯಕ್ ರವರನ್ನು ಸನ್ಮಾನಿಸಲಾಯಿತು. ಸಂಜೀವಿನಿ ಒಕ್ಕೂಟದ ಮೂಲಕ ಗ್ರಾಮದ ಸಂಜೀವಿನಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ತಾಲೂಕು ಪಂಚಾಯತ್ ಚಿತ್ತಾರ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಅಧ್ಯಕ್ಷರಾದ ರೋಶನಿ ಶೆಟ್ಟಿ, ಗ್ರಾಮ ಪಂಚಾಯತ್ ಶಂಕರನಾರಾಯಣ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ವೇತಲತಾ, ತಾಲೂಕು ಪಂಚಾಯತ್ ವಲಯ ಮೇಲ್ವಿಚಾರಕಿ ಮಮತಾ, ಶ್ರೀಶ ಒಕ್ಕೂಟದ ಅಧ್ಯಕ್ಷರಾದ ವಸಂತಿ ಜಿ ನಾಯ್ಕ್ ಗ್ರಾಮ ಪಂಚಾಯತ್ ಸದಸ್ಯರಾದ ಅನ್ನಪೂರ್ಣ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸುಜಿತ್ ಕುಮಾರ್, ಶಾಖಾ ವ್ಯವಸ್ಥಾಪಕ ಸಂಕೇತ್, ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಸಂಧ್ಯಾ, ಗ್ರಾಮ ಪಂಚಾಯತ್ ಸರ್ವ ಸದಸ್ಯರು ಮತ್ತು ಸಿಬಂದ್ದಿ ವರ್ಗ, ಹಾಗೂ ಸಂಜೀವಿನಿ ಒಕ್ಕೂಟದ ಸರ್ವ ಪದಾಧಿಕಾರಿಗಳು, ಸದಸ್ಯರು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಸ್ಥಳೀಯ ಸಂಪನ್ಮೂಲ ವ್ಯಕ್ತಿ ಕಸ್ತೂರಿ ಸ್ವಾಗತಿಸಿ, ಪಶು ಸಖಿ ಸವಿತಾ ವಂದಿಸಿದರು. ಮುಖ್ಯ ಪುಸ್ತಕ ಬರಹಗಾರರಾದ ಸುಮಂಗಲ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೆಂಕನಿಡಿಯೂರು ಕಾಲೇಜು: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ

ತೆಂಕನಿಡಿಯೂರು, ಅ.3: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...

ವಿಧಿಕ್ತ–2026 ಉದ್ಘಾಟನೆ

ಕುಂದಾಪುರ, ಅ.3: ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ವಾಣಿಜ್ಯ ವಿಭಾಗದ...

ಕ್ರಿಯೇಟಿವ್ ಕಾಲೇಜು: ಗಾಂಧಿ ಜಯಂತಿ ಸಂಭ್ರಮ

ಕಾರ್ಕಳ, ಅ.3: ಕ್ರಿಯೇಟಿವ್ ಪದವಿ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಜಯಂತಿ ಹಾಗೂ...
error: Content is protected !!