Home ಸುದ್ಧಿಗಳು ಪ್ರಾದೇಶಿಕ ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಕಟಪಾಡಿ: ರಜಾ ಶಿಬಿರ

ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಕಟಪಾಡಿ: ರಜಾ ಶಿಬಿರ

631
0

ಕಟಪಾಡಿ: ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಕಟಪಾಡಿ ವತಿಯಿಂದ 1ರಿಂದ 10ನೇ ತರಗತಿಯೊಳಗಿನ ಮಕ್ಕಳಿಗಾಗಿ ರಜಾ ಶಿಬಿರ ಎಸ್ ವಿ. ಎಸ್ ಹಿ. ಪ್ರಾ.ಶಾಲೆ ಕಟಪಾಡಿ ಇಲ್ಲಿ ಏಪ್ರಿಲ್ 13 ರಿಂದ 19ರವರೆಗೆ ಒಂದು ವಾರಗಳ ಕಾಲ ನಡೆಯಲಿದೆ. ಶಿಬಿರವು ಪ್ರತೀ ದಿನ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದ್ದು, ಶಿಬಿರದಲ್ಲಿ ಡ್ರಾಯಿಂಗ್, ಕ್ಲೇ ಮಾಡೆಲಿಂಗ್, ಅಭಿನಯ, ಮ್ಯಾಜಿಕ್, ಪೇಪರ್ ಕ್ರಾಪ್ಟ್, ಡ್ಯಾನ್ಸ್, ಟ್ಯಾಟೂ, ಮುಖವಾಡ ತಯಾರಿ, ಪಿಕ್ನಿಕ್ ಇತ್ಯಾದಿ ಚಟುವಟಿಕೆಗಳು ನಡೆಯಲಿವೆ.

ಕೇವಲ 50 ಮಂದಿಗೆ ಮಾತ್ರ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- ಕೆ.ನಾಗೇಶ್ ಕಾಮತ್, ಕಟಪಾಡಿ 9886432197

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.