Saturday, November 23, 2024
Saturday, November 23, 2024

ಬಾರಕೂರು ಕಾಲೇಜು: ಕನಕದಾಸ ಜಯಂತಿ

ಬಾರಕೂರು ಕಾಲೇಜು: ಕನಕದಾಸ ಜಯಂತಿ

Date:

ಬಾರಕೂರು, ನ.21: ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಎನ್.ಎಸ್.ಎಸ್ ರೋವರ್ ರೇಂಜರ್ಸ್ ಹಾಗೂ ಕನ್ನಡ ವಿಭಾಗ ಮತ್ತು ಕನಕದಾಸ ಅಧ್ಯಯನ ಸಂಶೋಧನ ಪೀಠ, ಉಡುಪಿ ವತಿಯಿಂದ ಕನಕದಾಸ ಜಯಂತಿಯ ಪ್ರಯುಕ್ತ ಕನಕ ಕೀರ್ತನೆ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ ಸಳ್ವಾಡಿ ಅವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದ ಬಿ.ಬಿ.ಎಂ.ಪಿ ಬೆಂಗಳೂರಿನ ಹೆಚ್ಚುವರಿ ಆಯುಕ್ತಾರಾದ ಅಜಿತ್ ಕುಮಾರ್ ಹೆಗ್ಡೆ, ಶಾನಾಡಿ ಅವರು ಮಾತನಾಡಿ, ಕನಕದಾಸರ ಜೀವನ ಚರಿತ್ರೆ ಹಾಗೂ ಕನಕ ಕೀರ್ತನೆಯ ಪ್ರಾಮುಖ್ಯತೆ ಬಗ್ಗೆ ಮನವರಿಕೆ ಮಾಡಿ, ಜಯಂತಿಗಳ ಆಚರಣೆಯ ಮಹತ್ವವನ್ನು ತಿಳಿಸಿದರು.

ರಾಜೇಶ್ ಶಾನುಭೋಗ್ ಹಾಗೂ ಬಳಗದವರಿಂದ ಕನಕ ಕೀರ್ತನೆ ಗೀತ ಗಾಯನ ಕಾರ್ಯಕ್ರಮವನ್ನು ನೆರೆವೇರಿಸಲಾಯಿತು.

ರೋಟರಿ ಬಾರ್ಕೂರು ಇವರ ವತಿಯಿಂದ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ವಿತರಿಸಲಾಯಿತು. ಕಾಲೇಜಿನ ಉಪನ್ಯಾಸಕರಾದ ಸತೀಶ್ ಬಿ. ಡಿ., ವಿದ್ಯಾ ಪಿ., ಡಾ. ಶ್ರೀದೇವಿ, ಗ್ರಂಥಪಾಲಕ ಹರೀಶ್ ಸಿ.ಕೆ., ಕನಕದಾಸ ಅಧ್ಯಯನ ಪೀಠದ ಸಿಬ್ಬಂದಿ ವರ್ಗ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಂಶೋಧನ ಕೇಂದ್ರ, ಮಾಹೆಯ ಆಡಳಿತಾಧಿಕಾರಿ ಡಾ. ಬಿ ಜಗದೀಶ್ ಶೆಟ್ಟಿ ಸ್ವಾಗತಿಸಿ, ಎನ್.ಎಸ್.ಎಸ್ ನ ಯೋಜನಾಧಿಕಾರಿ ರಾಧಾಕೃಷ್ಣ ನಾಯಕ್ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಶೈಲಜಾ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...

ಸಾಂಸ್ಕೃತಿಕ ಸ್ಪರ್ಧೆ: ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ, ನ.22: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...

ಅರುಣ್ಯಾ 2024: ಭಂಡಾರಕಾರ್ಸ್ ಪಿಯು ಕಾಲೇಜು ತಂಡ ಚಾಂಪಿಯನ್

ಬಸ್ರೂರು, ನ.22: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಉಡುಪಿ ಜಿಲ್ಲಾಮಟ್ಟದ...
error: Content is protected !!