ಕೋಟ, ನ.20: ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ ವತಿಯಿಂದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಶ್ರೀ ಮಳಲು ತಾಯಿ ದೇವಸ್ಥಾನ ಮಣೂರು ಇಲ್ಲಿ ಸಹಕಾರ ಸಪ್ತಾಹ-2024 ಕಾರ್ಯಕ್ರಮ ನಡೆಯಿತು. ನ್ಯಾಯವಾದಿ ಅನಂತಪದ್ಮನಾಭ ಐತಾಳ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಡಾ. ಕೃಷ್ಣ ಕಾಂಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಮಣೂರಿನ ಹಿರಿಯ ಕೃಷಿಕ ರವಿ ಮಯ್ಯ, ಹಾಲು ಉತ್ಪಾದಕರ ಸಹಕಾರಿ ಸಂಘ ಮಣೂರು ಇದರ ಅಧ್ಯಕ್ಷ ಪ್ರವೀಣ ಶೆಟ್ಟಿ, ಶ್ರೀ ಮಳಲು ತಾಯಿ ದೇವಸ್ಥಾನ, ಮಣೂರು ಇದರ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ, ಸಂಘದ ನಿರ್ದೇಶಕರಾದ ಟಿ. ಮಂಜುನಾಥ, ಜಿ. ತಿಮ್ಮ ಪೂಜಾರಿ, ಕೆ. ಉದಯಕುಮಾರ್ ಶೆಟ್ಟಿ, ಮಹೇಶ ಶೆಟ್ಟಿ, ರಂಜಿತ್ ಕುಮಾರ್, ರಾಜೇಶ ಉಪಾಧ್ಯ, ಗೀತಾ ಶಂಭು ಪೂಜಾರಿ, ರಶ್ಮಿತಾ, ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ನ್ಯಾಯವಾದಿ ಅನಂತಪದ್ಮನಾಭ ಐತಾಳ, ಸಹಕಾರದಿಂದ ಸ್ವ ಉದ್ಯೋಗ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಸಂಘದ ಸದಸ್ಯರು, ಸ್ವಸಹಾಯ ಗುಂಪುಗಳ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಠೇವಣಾತಿದಾರರು, ನಿವೃತ್ತ ಸಿಬ್ಬಂದಿಯವರು ಭಾಗಿಯಾದರು. ಸಂಘದ ನಿರ್ದೇಶಕರಾದ ಮಹೇಶ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ವಂದಿಸಿದರು. ನಿಶಾ ಪ್ರಾರ್ಥಿಸಿ, ಶಾಲಿನಿ ಹಂದೆ ಕಾರ್ಯಕ್ರಮ ನಿರೂಪಿಸಿದರು.