Monday, January 20, 2025
Monday, January 20, 2025

ನೆಹರು ಯುವ ಕೇಂದ್ರ: ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮ

ನೆಹರು ಯುವ ಕೇಂದ್ರ: ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮ

Date:

ಮಲ್ಪೆ, ಅ.2: ಗಾಂಧೀಜಿಯವರಂತಹ ವ್ಯಕ್ತಿಗಳು ಪ್ರಪಂಚದಲ್ಲಿ ಯಾರೂ ಇರಲು ಅಸಾಧ್ಯ ಅವರ ವ್ಯಕ್ತಿತ್ವವನ್ನು ನಾವೆಲ್ಲರೂ ಅರ್ಥ ಮಾಡಿದಾಗ ಅವರಲ್ಲಿರುವ ಅಪೂರ್ವ ಶಕ್ತಿ ನಮಗೆ ತಿಳಿಯಲು ಸಾಧ್ಯ ಎಂದು ರೆಡ್ ಕ್ರಾಸ್ ಸೊಸೈಟಿ ಉಡುಪಿ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು. ಅವರು ಗಾಂಧಿ ಜಯಂತಿಯ ಪ್ರಯುಕ್ತ ನೆಹರು ಯುವ ಕೇಂದ್ರ, ಜಿಲ್ಲಾಡಳಿತ ಉಡುಪಿ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಲ್ಪೆ ಸಮುದ್ರ ತೀರದಲ್ಲಿ ನಡೆದ ಸ್ವಚ್ಛತಾ ಹಿ ಸೇವಾ 2024 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮಾನಸಿಕ ಸ್ವಚ್ಛತೆ ಭೌತಿಕ ಸ್ವಚ್ಛತೆ ಮತ್ತು ಪರಿಸರ ಸ್ವಚ್ಛತೆಯ ಬಗ್ಗೆ ಗಾಂಧೀಜಿಯವರು ಹೆಚ್ಚಿನ ಒತ್ತನ್ನು ನೀಡಿದರು, ಈ ನಿಟ್ಟಿನಲ್ಲಿ ಸ್ವಚ್ಛತಾ ಅಭಿಯಾನ ಗಾಂಧೀಜಿಯವರಿಗೆ ಸಲ್ಲಿಸಿದ ಅಪೂರ್ವ ನಮನವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಸುಕನ್ಯಾ ಮೇರಿ ನೆರವೇರಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕ ಪ್ರೊ. ರಘು ನಾಯ್ಕ್, ಮಮತಾ, ಸರಸ್ವತಿ ಯುವಕ ಮಂಡಲದ ಅಧ್ಯಕ್ಷ ಪ್ರಸಾದ್, ಉಡುಪಿ ಎಸ್.ಕೆ.ಪಿ ಎ ಅಧ್ಯಕ್ಷ ಸುಧೀರ್ ಶೆಟ್ಟಿ, ಮಾನವ ಹಕ್ಕು, ಮಹಾ ಮೈತ್ರಿಯ ಪ್ರೀತಿ ತಂಗಪ್ಪನ್, ನೆಹರು ಯುವ ಕೇಂದ್ರದ ಅಧಿಕಾರಿ ಶ್ರೀದೇವಿ ರಾವ್ ಮುಂತಾದವರು ಉಪಸ್ಥಿತರಿದ್ದರು. ಸ್ವಚ್ಛ ಭಾರತ್ ಫ್ರೆಂಡ್ಸ್ ನ ರಾಘವೇಂದ್ರ ಪ್ರಭು ಕರ್ವಾಲು ಸ್ವಚ್ಚತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ತೆಂಕನಿಡಿಯೂರು ಪ್ರ.ದ ಕಾಲೇಜು ಮತ್ತು ಸರಸ್ವತಿ ಯುವಕ ಮಂಡಲ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ ನಡೆಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಕೆರೆ ಮರು ನಿರ್ಮಾಣಕ್ಕೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ

ಮಣಿಪಾಲ, ಜ.20: ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಕಾಮಗಾರಿ ಸ್ಥಳಕ್ಕೆ...

ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ

ಕೋಟ, ಜ.20: ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ...

ಪಂಚವರ್ಣದ ನೇತೃತ್ವದಲ್ಲಿ 238 ನೇ ವಾರದ ಪರಿಸರ ಸ್ನೇಹಿ ಅಭಿಯಾನ

ಕೋಟ, ಜ.20: ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಪಂಚವರ್ಣ...

ಹನೆಹಳ್ಳಿ: ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣೆ

ಬಾರಕೂರು, ಜ.20: ಲಯನ್ಸ್ ಕ್ಲಬ್ ಬಾರ್ಕೂರು (Dist 317 zone 1Region...
error: Content is protected !!