Tuesday, October 1, 2024
Tuesday, October 1, 2024

ಪುಸ್ತಕ ಓದಿ ಬಹುಮಾನ ಗೆಲ್ಲಿ

ಪುಸ್ತಕ ಓದಿ ಬಹುಮಾನ ಗೆಲ್ಲಿ

Date:

ಉಡುಪಿ, ಅ.1: ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಾಹಿತ್ಯ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಓದಿ ಬಹುಮಾನ ಗೆಲ್ಲಿ ಎಂಬ ಸ್ಪರ್ಧೆ ಏರ್ಪಡಿಸಲಾಗಿತ್ತು. ಪುಸ್ತಕ ಓದುವ ಹವ್ಯಾಸ ಬೆಳೆಸುವಲ್ಲಿ ಮಕ್ಕಳು ಪ್ರೇರಣೆ ಪಡೆಯುವ ಉದ್ದೇಶದಿಂದ ದಿವಂಗತ ಡಾ. ಉಪ್ಪಂಗಳ ರಾಮ ಭಟ್ಟರು ಬರೆದಿರುವ ಮರೆಯಲಾಗದ ಮಹನೀಯರು ಎಂಬ ಪುಸ್ತಕವನ್ನು ಆಧರಿಸಿ ‘ನಾ ಮೆಚ್ಚಿದ ವ್ಯಕ್ತಿತ್ವದ ಬಗ್ಗೆ’ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ನಡೆಸಲಾಯಿತು. ಶಂಕರಿ ಭಟ್ ಅವರು ಕಲಿಕೆಗೆ ಮಾಧ್ಯಮ ತೊಡಕಲ್ಲ, ಆಸಕ್ತಿಯಿಂದ ಕಲಿತು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ತಿಳಿಸಿದರು. ಇನ್ನೋರ್ವ ಅತಿಥಿ, ಎಸ್.ಡಿ.ಎಂ.ಸಿ ಗೌರವಾಧ್ಯಕ್ಷೆ ತಾರಾದೇವಿ ಇವರು ಓದಿ, ಜ್ಞಾನ ಗಳಿಸಿ, ಭವಿಷ್ಯ ರೂಪಿಸಿಕೊಳ್ಳಿ ಎಂದು ಕರೆ ನೀಡಿದರರು. ಈ ಎರಡೂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈರ್ವರು ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಿದರು. ಸಂಸ್ಥೆಯ ಹಿರಿಯ ಶಿಕ್ಷಕಿ ಇಂದಿರಾ ಬಿ ಸ್ವಾಗತಿಸಿ, ಶಿಕ್ಷಕಿ ನಾಗರತ್ನ ಹೆಗಡೆ ನಿರೂಪಿಸಿ ವಂದಿಸಿದರು, ಶಿಕ್ಷಕಿಯರಾದ ಮೀನಾಕ್ಷಿ, ಪ್ರತಿಭಾ ಮತ್ತು ಮಂಜುಳಾ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಥ್ರೋಬಾಲ್: ಶಮಿತ್ ಖಾರ್ವಿ ರಾಜ್ಯಮಟ್ಟಕ್ಕೆ

ಉಡುಪಿ, ಅ.1: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಹಿಂದೂ...

ಪ್ರತಿಯೊಬ್ಬರು ಹಿರಿಯ ನಾಗರಿಕರನ್ನು ಪ್ರೀತಿ-ಸಹಾಭೂತಿಯಿಂದ ಕಾಣಬೇಕು: ಕಿರಣ್ ಎಸ್ ಗಂಗಣ್ಣವರ್

ಉಡುಪಿ, ಅ.1: ಸಮಾಜದಲ್ಲಿ ಹಿರಿಯರಿಗೆ ಅವರದ್ದೆ ಆದ ಗೌರನೀಯ ಹಾಗೂ ಪೂಜ್ಯ...

ಅರ್ಹರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ: ಜಿಲ್ಲಾಧಿಕಾರಿ

ಉಡುಪಿ, ಅ.1: ಜಗತ್ತಿನಲ್ಲಿ ಮಾನವನ ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ಒಂದೊಂದು ರಕ್ತದ...

ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ: ಪ್ರೊ. ಧರ್ಮ

ವಿದ್ಯಾಗಿರಿ, ಅ.1: ನಾವು ಸೇವಿಸುವ ಆಹಾರ ಯಾವುದೇ ಬಾಹ್ಯ ಅಂಶಗಳಿಂದ ನಿರ್ಧರಿತವಾಗಿರಬಾರದು....
error: Content is protected !!