ಮಣಿಪಾಲ, ಜೂ.12: ಮಣಿಪಾಲದ ಎಂಐಟಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದಲ್ಲಿ ಪೂರ್ಣಾವಧಿಯ ಸಂಶೋಧನಾ ವಿದ್ಯಾರ್ಥಿ ಡಾ. ತಾನ್ಯಾ ಮೆಂಡೆಜ್ ಅವರು ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಾಹೆಯಿಂದ, ಮಣಿಪಾಲದ ಎಂಐಟಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಜಿ. ಸುಬ್ರಹ್ಮಣ್ಯ ನಾಯಕ್ ಅವರ ಮಾರ್ಗದರ್ಶನದಲ್ಲಿ ‘ಆಸಿಕ್ ಆಧಾರಿತ ಕಂಪ್ಯೂಟೇಶನಲ್ ಘಟಕದ ಅಭಿವೃದ್ಧಿ ಫಾರ್ ಸ್ಟ್ಯಾಂಡಲೋನ್ ಇಮೇಜ್ ಪ್ರೊಸೆಸಿಂಗ್’ ಎಂಬ ಮಹಾಪ್ರಬಂಧಕ್ಕಾಗಿ ಪಿಎಚ್‌ಡಿ ಪದವಿಯನ್ನು ಪಡೆದರು. ಡಾ. ತಾನ್ಯಾ ಮೆಂಡೆಜ್ ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ಮಂಗಳೂರು ಕ್ಯಾಂಪಸ್‌ನ ಗ್ರೂಪ್ ಪ್ರಾಜೆಕ್ಟ್ ಮ್ಯಾನೇಜರ್ ಅಡಿಸನ್ ಲಿಯೋ ಎರಿಕ್ ಅವರ ಪತ್ನಿ.
ಡಾ. ತಾನ್ಯಾ ಮೆಂಡೆಜ್ ಅವರಿಗೆ ಪಿಎಚ್‌ಡಿ
ಡಾ. ತಾನ್ಯಾ ಮೆಂಡೆಜ್ ಅವರಿಗೆ ಪಿಎಚ್‌ಡಿ
Date: