Monday, January 20, 2025
Monday, January 20, 2025

ಬ್ರಾಹ್ಮಣ ಮಹಾಸಭಾ (ರಿ.) ಪುತ್ತೂರು: 20ನೇ ವಾರ್ಷಿಕೋತ್ಸವ

ಬ್ರಾಹ್ಮಣ ಮಹಾಸಭಾ (ರಿ.) ಪುತ್ತೂರು: 20ನೇ ವಾರ್ಷಿಕೋತ್ಸವ

Date:

ಪುತ್ತೂರು, ಮೇ 20: ಬ್ರಾಹ್ಮಣ ಮಹಾಸಭಾ ಪುತ್ತೂರು ವತಿಯಿಂದ 20ನೇ ವಾರ್ಷಿಕೋತ್ಸವ ಸಮಾರಂಭ ಪುತ್ತೂರಿನ ಶ್ರೀ ಭಗವತೀ ಸಭಾಗೃಹದಲ್ಲಿ ನಡೆಯಿತು. ಭಾವಿ ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಮಾರಂಭವನ್ನು ಉದ್ಘಾಟಿಸಿದರು. ಇಂದಿನ ಯುವಪೀಳಿಗೆ ಸಂಘಟನೆಯಿಂದ ವಿಮುಖರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ಕೂಡ ಸೇರಿಸಿಕೊಂಡು ಮುಂದುವರಿದಲ್ಲಿ ವಿಪ್ರ ಸಂಘಟನೆಗಳು ಸದೃಢಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಅನುಗ್ರಹ ಸಂದೇಶ ನೀಡಿದರು. ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಹರಿಶ್ಚಂದ್ರ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ ಮತ್ತು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ ಪರ್ಕಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಾಶಂಸನೆಗೈದರು.

ಅನೇಕ ವರ್ಷಗಳಿಂದ ಗೋಸೇವೆ ಮಾಡುತ್ತಿರುವ ಸುಜಾತ ಬಾಲಕೃಷ್ಣ ಪುತ್ತೂರು, ರವಿಕಾಂತ್ ಭಟ್ ನಿಟ್ಟೂರು ಮತ್ತು ರಾಧಾಕೃಷ್ಣ ಭಟ್ ಪುತ್ತೂರು ಇವರನ್ನು ಗೋಪಾಲಕರ ನೆಲೆಯಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ವಲಯದ ವಿದ್ಯಾರ್ಥಿಗಳಾದ ಭಾರ್ಗವಿ ರಾವ್ ಜಿ., ಕಾರುಣ್ಯ ಸೋಮಯಾಜಿ, ಮಾನ್ಯ ತಂತ್ರಿ ಪುತ್ತೂರು, ನೀರಜ್ ಬಾಲಾಜಿ ಬಾಲ್ತಿಲ್ಲಾಯ, ಸಂಚಿತಾ ಜಿ. ಭಟ್, ಅಂಕಿತಾ ಭಟ್, ಮಹಿಮಾ ರಾವ್, ವೈಭವಿ ಆಚಾರ್ಯ, ಪ್ರಮಥ್ ಭಾಗವತ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆಪತ್ಬಾಂಧವ ಸಮಿತಿಯ ವತಿಯಿಂದ ಅಶಕ್ತರಿಗೆ ವೈದ್ಯಕೀಯ ಧನಸಹಾಯವಾಗಿ ರೂ.30,000 ಹಸ್ತಾಂತರಿಸಲಾಯಿತು. ಆಪದ್ಬಾಂಧವ ಸಮಿತಿಗೆ ಹೆಚ್ಚಿನ ರೀತಿಯಲ್ಲಿ ಧನಸಹಾಯ ನೀಡಿದ ದಾನಿಗಳನ್ನು ಗುರುತಿಸಿ ಗೌರವಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಮೇ ತಿಂಗಳಲ್ಲಿ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿದ ದಂಪತಿಗಳನ್ನು ಗುರುತಿಸಲಾಯಿತು. ಕಳೆದ ಅವಧಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ವಿಶೇಷ ಸಹಕಾರ ನೀಡಿದವರನ್ನು ವಲಯದ ವತಿಯಿಂದ ಗೌರವಿಸಲಾಯಿತು. 2024-25 ನೇ ಸಾಲಿನ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಲಾಯಿತು.

ಸುನೀತಾ ಚೈತನ್ಯ, ಅನುಪಮಾ, ಸೌದಾಮಿನಿ ರಾವ್, ಸುರೇಶ್ ಕಾರಂತ್, ವಿಜಯ್ ಕುಮಾರ್, ರಾಮದಾಸ ಉಡುಪ, ಚಂದ್ರಶೇಖರ ಅಡಿಗ, ಎಂ.ಆರ್. ಆಚಾರ್ಯ, ಆಪತ್ಬಾಂಧವ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಉಡುಪ, ಕೋಶಾಧಿಕಾರಿ ಕೃಷ್ಣಪ್ರಸಾದ್ ಕಾರಂತ್ ಸಹಕರಿಸಿದರು. ಸಭಾ ಕಾರ್ಯಕ್ರಮದ ಮೊದಲು ಉಡುಪಿ ಜಿಲ್ಲಾ ಕೃಷಿಕ ಸಂಘದ ಕರಂಬಳ್ಳಿ ವಲಯದ ಸಹಯೋಗದಲ್ಲಿ ಮನೆಮನೆಯಲ್ಲಿ ಮಲ್ಲಿಗೆ ಕೃಷಿ, ವೈಜ್ಞಾನಿಕ ಪದ್ಧತಿಯಲ್ಲಿ ಲಾಭದಾಯಕ ಮಲ್ಲಿಗೆ ಹಾಗೂ ತೋಟಗಾರಿಕಾ ಹಣ್ಣಿನ ಬೆಳೆಯ ಸಮಗ್ರ ಮಾಹಿತಿ ಶಿಬಿರ ಏರ್ಪಡಿಸಲಾಗಿತ್ತು. ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷರಾದ ಬಂಟಕಲ್ಲು ರಾಮಕೃಷ್ಣ ಶರ್ಮ ಮತ್ತು ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್ ಹಾಗೂ ಶ್ರೀಪತಿ ಭಟ್ ಕರಂಬಳ್ಳಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷೆ ಶುಭಾ ಬಾಳ್ತಿಲ್ಲಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಯಲಕ್ಷ್ಮಿ ಭಟ್ ಪ್ರಾರ್ಥಿಸಿದರು. ಕಾರ್ಯದರ್ಶಿ ಮಂಜುಳಾ ವಿ. ಪ್ರಸಾದ್ ವಾರ್ಷಿಕ ವರದಿ ಮಂಡಿಸಿದರು. ಚೈತನ್ಯ ಎಂ.ಜಿ. ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಾಸಭಾ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಕೆರೆ ಮರು ನಿರ್ಮಾಣಕ್ಕೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ

ಮಣಿಪಾಲ, ಜ.20: ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಕಾಮಗಾರಿ ಸ್ಥಳಕ್ಕೆ...

ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ

ಕೋಟ, ಜ.20: ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ...

ಪಂಚವರ್ಣದ ನೇತೃತ್ವದಲ್ಲಿ 238 ನೇ ವಾರದ ಪರಿಸರ ಸ್ನೇಹಿ ಅಭಿಯಾನ

ಕೋಟ, ಜ.20: ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಪಂಚವರ್ಣ...

ಹನೆಹಳ್ಳಿ: ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣೆ

ಬಾರಕೂರು, ಜ.20: ಲಯನ್ಸ್ ಕ್ಲಬ್ ಬಾರ್ಕೂರು (Dist 317 zone 1Region...
error: Content is protected !!