ಕೋಟ, ಮೇ 15: ಬ್ರಹ್ಮಾವರ ತಾಲೂಕು ಅಚ್ಲಾಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ರೂ ೧,೫೦,೦೦೦ ಡಿ.ಡಿಯನ್ನು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಯವರಿಗೆ ಹಸ್ತಾಂತರಿಸಲಾಯಿತು. ಸಮಿತಿಯ ಸದಸ್ಯರಾದ ಪ್ರಕಾಶ್ ಆಚಾರ್, ಶಿವರಾಮ ಕೆ.ಎಂ., ರಾಜೇಶ್ ಗಾಣಿಗ, ಗೋಪಾಲ ಗಾಣಿಗ, ಭಾಸ್ಕರ ಶೆಟ್ಟಿ, ವಸಂತ ಶೆಟ್ಟಿ, ಹಾಗೂ ವಲಯದ ಮೇಲ್ವಿಚಾರಕರಾದ ರಾಜಶೇಖರ್, ಸೇವಾ ಪ್ರತಿನಿಧಿಯವರಾದ ಲಕ್ಷ್ಮಿ, ವಿದ್ಯಾಲತಾ ಉಪಸ್ಥಿತರಿದ್ದರು.
ಅಚ್ಲಾಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿಗೆ ನೆರವು
ಅಚ್ಲಾಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿಗೆ ನೆರವು
Date: