ಕೋಟ, ಮೇ 6: ನಿಸರ್ಗದ ಮಡಿಲಲ್ಲಿ ಪ್ರತಿ ವರ್ಷ ಶಿಬಿರವನ್ನು ಕಳೆಯುತ್ತಿದ್ದೀರಿ. ನಿಸರ್ಗ ನೆರಳನ್ನು, ಗಾಳಿಯನ್ನು ನೀಡಿ ನಿಮ್ಮನ್ನು ತಂಪಾಗಿಸಿದೆ. ಪರಿಸರದ ಬಗೆಗೆ ಕಾಳಜಿಯುಳ್ಳವರಾಗಿ. ಎಲ್ಲೆಂದರಲ್ಲಿ ಕಸವನ್ನು ಎಸೆಯುವುದನ್ನು ತಡೆಯಿರಿ. ನಿಮ್ಮ ಭವಿಷ್ಯಕ್ಕೆ ಪರಿಸರ ಬೇಕೇ ಬೇಕು. ಎಳವೆಯಿಂದಲೇ ಪರಿಸರದ ಕಾಳಜಿ ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದು ಪತ್ರಕರ್ತ ರವೀಂದ್ರ ಕೋಟ ಶಿಬಿರವನ್ನುದ್ಧೇಶಿಸಿ ಮಾತನಾಡಿದರು. ಯಶಸ್ವಿ ಕಲಾವೃಂದ ಕೊಮೆ-ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದಲ್ಲಿ 24ನೇ ದಿನದ ‘ರಜಾರಂಗು-24’ ಶಿಬಿರದ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ರಂಗ ನಿರ್ದೇಶಕ ನಾಗೇಶ್ ಕೆದೂರು, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಶಿಬಿರಾರ್ಥಿ ಶಶಾಂಕ್ ಉಪಸ್ಥಿತರಿದ್ದರು.
ಎಳವೆಯಿಂದಲೇ ಪರಿಸರ ಕಾಳಜಿ ಬೆಳೆಸಿಕೊಳ್ಳಿ: ರವೀಂದ್ರ ಕೋಟ
ಎಳವೆಯಿಂದಲೇ ಪರಿಸರ ಕಾಳಜಿ ಬೆಳೆಸಿಕೊಳ್ಳಿ: ರವೀಂದ್ರ ಕೋಟ
Date: