ಬ್ರಹ್ಮಾವರ, ಮೇ 3: ಲಕ್ಷಗಟ್ಟಲೆ ಸಂಪಾದನೆ ಇದ್ದರೂ, ಹೊಟ್ಟೆ ತುಂಬ ಊಟ ಮಾಡಲು ಎಲ್ಲಾ ರೀತಿಯ ಅನುಕೂಲವಿದ್ದರೂ ಕೆಲವರು ಒಂದು ರೂಪಾಯಿ ಕೂಡ ದಾನಕ್ಕಾಗಿ ಖರ್ಚು ಮಾಡಲು ಹಿಂದೆ ಮುಂದೆ ನೋಡುವ ಪ್ರಸ್ತುತ ಕಾಲಘಟ್ಟದಲ್ಲಿ, ಇಲ್ಲೊಬ್ಬರು ಅನೇಕ ದೇವಸ್ಥಾನಗಳ ಮುಂದೆ ಬಿಸಿಲು ಮಳೆ ಲೆಕ್ಕಿಸದೆ ಭಿಕ್ಷೆ ಬೇಡಿ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿಯನ್ನು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನ್ನದಾನಕ್ಕೆ ನೀಡಿದ ಅಪರೂಪದ ಘಟನೆ ನಡೆದಿದೆ. ಈ ಹಿಂದೆ ಹಲವು ದೇವಳಗಳಿಗೆ ದೇಣಿಗೆ ನೀಡಿರುವ ಅಶ್ವತ್ಥಮ್ಮ ಕಂಚುಗೋಡು ಅವರು ಭಿಕ್ಷೆ ಬೇಡಿ ಸಂಗ್ರಹಿಸಿದ 1 ಲಕ್ಷ ರೂಪಾಯಿ ಅನ್ನದಾನಕ್ಕೆ ನೀಡಿದ್ದಾರೆ. ದೇವಳದ ಧರ್ಮದರ್ಶಿಗಳಾದ ಎಚ್ ಧನಂಜಯ್ ಶೆಟ್ಟಿ ಶಾಲು ಹೊದಿಸಿ ಶ್ರೀ ದೇವಿಯ ಪ್ರಸಾದ ನೀಡಿದರು. ದೇವಳದ ನೌಕರರಾದ ಸಂಜೀವ ಕುಲಾಲ್, ರವಿರಾಜ್ ಶೆಟ್ಟಿ, ಪದ್ಮನಾಭ ರಾವ್, ರಿತೇಶ್ ಎನ್ ದೊಡ್ಮನಿ, ಅನ್ನಸಂತರ್ಪಣಾ ವಿಭಾಗದ ಮೇಲ್ವಿಚಾರಕ ದಿನೇಶ್ ಕೊಠಾರಿ ಹಾಗೂ ಉದ್ಯಮಿ, ಮುಖಂಡರಾದ ಸಂತೋಷ್ ಶೆಟ್ಟಿ ಮುಂಡಾಡಿ ಉಪಸ್ಥಿತರಿದ್ದರು.
ಭಿಕ್ಷೆ ಬೇಡಿ ಸಂಗ್ರಹಿಸಿದ 1 ಲಕ್ಷ ರೂಪಾಯಿ ಅನ್ನದಾನಕ್ಕೆ ನೀಡಿದ ಅಶ್ವತ್ಥಮ್ಮ
ಭಿಕ್ಷೆ ಬೇಡಿ ಸಂಗ್ರಹಿಸಿದ 1 ಲಕ್ಷ ರೂಪಾಯಿ ಅನ್ನದಾನಕ್ಕೆ ನೀಡಿದ ಅಶ್ವತ್ಥಮ್ಮ
Date: