Tuesday, November 26, 2024
Tuesday, November 26, 2024

ಡಾ. ಮಾಧವ ಪೈಯವರ ಮಾನವೀಯತೆಯ ಹೃದಯಶೀಲ ಗುಣ ಆದರ್ಶಪ್ರಾಯ: ಪ್ರೊ. ಶೆಟ್ಟಿ

ಡಾ. ಮಾಧವ ಪೈಯವರ ಮಾನವೀಯತೆಯ ಹೃದಯಶೀಲ ಗುಣ ಆದರ್ಶಪ್ರಾಯ: ಪ್ರೊ. ಶೆಟ್ಟಿ

Date:

ಉಡುಪಿ, ಏ.30: ಡಾ.ಮಾಧವ ಪೈಯವರು ತಮ್ಮ ಬಾಲ್ಯದಿಂದಲೂ ರೂಢಿಸಿಕೊಂಡ ಅತೀ ಶ್ರೇಷ್ಠ ಗುಣವೆಂದರೆ ಮಾನವೀಯತೆಯ ಹೃದಯ. ತಮ್ಮ ಸಂಸಾರದೊಂದಿಗೆ ತಮ್ಮ ಸಮಾಜವನ್ನು ಆರೇೂಗ್ಯ ಪೂರ್ಣವಾಗಿ ಬೆಳೆಸುವಲ್ಲಿ ಡಾ. ಮಾಧವ ಪೈ ಅವರ ಕೊಡುಗೆ ಅನನ್ಯವಾದದ್ದು. ಸಾಮಾಜಿಕ ಸಹಭಾಗಿತ್ವದ ಕಲ್ಪನೆಯ ಆಧಾರವಾಗಿಟ್ಟುಕೊಂಡು ತಮ್ಮ ಎಲ್ಲಾ ಸಂಸ್ಥೆಗಳನ್ನು ಕಟ್ಟಿದ ಮಹಾನ್ ಸಾಧಕ ಡಾ. ಮಾಧವ ಪೈಯವರು. ಹಾಗಾಗಿಯೇ ಅವರು ಕಟ್ಟಿದ ಶಿಕ್ಷಣ, ಆರೇೂಗ್ಯ, ಬ್ಯಾಂಕಿಂಗ್ ಸಂಸ್ಥೆಗಳು ಇಂದಿನ ಜಾಗತಿಕ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಿ ಬೆಳೆದು ನಿಲ್ಲಲು ಸಾಧ್ಯವಾಯಿತು ಅನ್ನುವುದು ವೇದ್ಯವಾಗುತ್ತದೆ ಎಂದು ಎಂ.ಜಿ.ಎಂ.ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.

ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಹಮ್ಮಿಕೊಂಡ ಕಾಲೇಜಿನ ಸಂಸ್ಥಾಪಕ ಡಾ ಮಾಧವ ಪೈ ಅವರ 126 ಜನ್ಮದಿನಾಚರಣೆ ಸಂದರ್ಭ ಸಂಸ್ಮರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮಿನಾರಾಯಣ ಕಾರಂತ ವಹಿಸಿದ್ದರು. ಎಂ.ಜಿ.ಎಂ. ಪದವಿಪೂರ್ವ ವಿಭಾಗದ ಪ್ರಾಂಶುಪಾಲೆ ಮಾಲತಿದೇವಿ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅರುಣ ಕುಮಾರ್ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಎಂ.ವಿಶ್ವನಾಥ ಪೈ ವಂದಿಸಿದರು. ಕಾಲೇಜಿನ ಆಡಳಿತ ಸೌಧದ ಮುಂಭಾಗದಲ್ಲಿರುವ ಡಾ.ಮಾಧವ ಪೈ ಅವರ ಪ್ರತಿಮೆಗೆ ಗೌರವಾರ್ಪಣೆ ಮಾಡಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!