ಕೋಟ, ಏ.29: ಎಳವೆಯಲ್ಲಿಯೇ ಮಕ್ಕಳಲ್ಲಿ ಪರಿಸರದ ಜೊತೆ ಭಾವನಾತ್ಮಕ ಬೆಸುಗೆಯಾಗಬೇಕು, ಪರಿಸರ ಸಂರಕ್ಷಣೆ ಉದ್ದೇಶ ಅವರ ಮನದಲ್ಲಿ ಮೂಡಿದಾಗ ಇನ್ನಷ್ಟೂ ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾಗಲಿದೆ. ಬೇಸಿಗೆ ಶಿಬಿರಗಳಲ್ಲಿ ಪರಿಸರದ
ವಿಷಯಾಧಾರಿತ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು. ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ, ಉಸಿರು ಕೋಟ, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಕೋಟತಟ್ಟು ಗ್ರಾಮ ಪಂಚಾಯತ್ ಅವರ ಆಶ್ರಯದಲ್ಲಿ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಕರಾವಳಿ ಕಣ್ಮಣಿ ಮತ್ಸೋದ್ಯಮಿ ದಿ. ಕೆ.ಸಿ ಕುಂದರ್ ಸ್ಮರಣಾರ್ಥವಾಗಿ ನಡೆಯುವ 24 ನೇ ವರ್ಷದ ಬೇಸಿಗೆ ಶಿಬಿರ ವಿಕಸನ-2024 ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಗಿರೀಶ್ ಆಚಾರ್ಯ ವಕ್ವಾಡಿ, ಸುಮನ ಹೇರ್ಳೆ, ಮಂಜುನಾಥ ಗುಂಡ್ಮಿ, ಪ್ರದೀಪ್ ಬಸ್ರೂರು, ಶಿಬಿರದ ನಿರ್ದೇಶಕ ನರೇಂದ್ರ ಕುಮಾರ್ ಕೋಟ, ಸತೀಶ್ ವಡ್ಡರ್ಸೆ, ಶಿಬಿರದ ತಂಡಗಳ ನಾಯಕರು ಉಪಸ್ಥಿತರಿದ್ದರು.
ಎಳವೆಯಲ್ಲಿಯೇ ಮಕ್ಕಳಲ್ಲಿ ಪರಿಸರದ ಜೊತೆ ಭಾವನಾತ್ಮಕ ಬೆಸುಗೆಯಾಗಬೇಕು: ರವೀಂದ್ರ ಕೋಟ
ಎಳವೆಯಲ್ಲಿಯೇ ಮಕ್ಕಳಲ್ಲಿ ಪರಿಸರದ ಜೊತೆ ಭಾವನಾತ್ಮಕ ಬೆಸುಗೆಯಾಗಬೇಕು: ರವೀಂದ್ರ ಕೋಟ
Date: