Home ಸುದ್ಧಿಗಳು ಪ್ರಾದೇಶಿಕ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ತೀವ್ರ ರಕ್ತದ ಕೊರತೆ: ರಕ್ತದಾನ ಮಾಡಿ ಜೀವ ಉಳಿಸಿ

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ತೀವ್ರ ರಕ್ತದ ಕೊರತೆ: ರಕ್ತದಾನ ಮಾಡಿ ಜೀವ ಉಳಿಸಿ

105
0

ಮಣಿಪಾಲ, ಏ.25: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹೆಚ್ಚಿನ ಯಾವುದೇ ರಕ್ತದಾನ ಶಿಬಿರ ನಡೆಯುತ್ತಿಲ್ಲ. ಆದ್ದರಿಂದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ರಕ್ತದ ತೀವ್ರ ಕೊರತೆಯಿಂದ ಕೆಲವೊಂದು ಕಾಯಿಲೆಗಳಿಗೆ ಮತ್ತು ಅಪಘಾತ ಸಂದರ್ಭದಲ್ಲಿ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವ ಪ್ರಮೇಯ ತಲೆದೂರಿದೆ. ಆದ್ದರಿಂದ ಈ ಬಿಕ್ಕಟ್ಟನ್ನು ನಿವಾರಿಸಲು ಮತ್ತು ಜೀವ ಉಳಿಸಲು ಸಾರ್ವಜನಿಕರು ರಕ್ತದಾನ ಮಾಡುವಂತೆ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮನವಿ ಮಾಡಿದ್ದಾರೆ.

ನಿಮ್ಮ ಕೊಡುಗೆ ಗಮನಾರ್ಹ ವ್ಯತ್ಯಾಸವನ್ನು ಮಾಡಬಹುದು. ದಯವಿಟ್ಟು ರಕ್ತದಾನ ಮಾಡಿ ಮತ್ತು ಈ ತುರ್ತು ಅಗತ್ಯದ ಸಮಯದಲ್ಲಿ ನಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸಲು ನಮಗೆ ಸಹಾಯ ಮಾಡಿ. ರಕ್ತ ನಿಧಿಯಲ್ಲಿ ಬೆಳೆಗ್ಗೆ ಗಂಟೆ 7:00 ರಿಂದ ರಾತ್ರಿ ಗಂಟೆ 7:00 ರವರೆಗೆ ರಕ್ತ ದಾನ ಮಾಡಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ರಕ್ತ ನಿಧಿ ದೂ: 0820 2923191 ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.