Home ಸುದ್ಧಿಗಳು ಪ್ರಾದೇಶಿಕ ಸಂಘ ಸಂಸ್ಥೆಗಳಿಂದ ಜಾತ್ರೋತ್ಸವಕ್ಕೆ ಹೊಸ ಮೆರುಗು: ಎಂ.ವಿ ಮಯ್ಯ

ಸಂಘ ಸಂಸ್ಥೆಗಳಿಂದ ಜಾತ್ರೋತ್ಸವಕ್ಕೆ ಹೊಸ ಮೆರುಗು: ಎಂ.ವಿ ಮಯ್ಯ

82
0

ಕೋಟ, ಏ.22: ಸ್ಥಳೀಯ ದೇಗುಲಗಳ ಜಾತ್ರೋತ್ಸವದಲ್ಲಿ ಸಂಘಸಂಸ್ಥೆಗಳ ಕೊಡುಗೆ ಅನನ್ಯವಾಗಿದೆ ಎಂದು ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಮಣೂರು ವಿಷ್ಣುಮೂರ್ತಿ ಮಯ್ಯ ಅಭಿಪ್ರಾಯಪಟ್ಟರು. ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಎರಡನೆ ದಿನದ ಸಾಂಸ್ಕೃತಿಕ ಪರ್ವದ ಅಂಗವಾಗಿ ಮಣೂರು ಫ್ರೆಂಡ್ಸ್ ಮಣೂರು ಹಮ್ಮಿಕೊಂಡ ೨೩ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘ ಸಂಸ್ಥೆಗಳು ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಂಡು ತನ್ಮೂಲಕ ಗ್ರಾಮಗಳ ಅಭಿವೃದ್ಧಿ, ಸ್ವಚ್ಛತೆ ಇನ್ನಿತರ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡಬೇಕು. ಮಣೂರು ಫ್ರೆಂಡ್ಸ್ ಸಾಮಾಜಿಕವಾಗಿ ಧಾರ್ಮಿಕವಾಗಿ ತನ್ನದೆ ಆದ ವೈಶಿಷ್ಟ್ಯತೆಯನ್ನು ಹೊಂದಿರುವುದು ಶ್ಲಾಘನೀಯ ಎಂದರು. ಸಭೆಯ ಅಧ್ಯಕ್ಷತೆಯನ್ನು ಮಣೂರು ಫ್ರೆಂಡ್ಸ್ ಗೌರವ ಸಲಹೆಗಾರ ಎಂ.ಸುಬ್ರಾಯ ಆಚಾರ್ ವಹಿಸಿದ್ದರು. ಸ್ಥಳೀಯ ಸಾಧಕ ಹರ್ತಟ್ಟು ನಾರಾಯಣ ಆಚಾರ್, ದೇಗುಲದ ಪರಿಚಾರಕರಾದ ಬಾಬಿ ದೇವಾಡಿಗ, ಕಮಲ ದೇವಾಡಿಗ, ಗಂಗಾ ದೇವಾಡಿಗ, ಚಿತ್ರ ಕಲಾವಿದ ನಾಗೇಶ್ ಆಚಾರ್, ಮಾಸ್ಟರ್ ಅಥ್ಲೆಟಿಕ್ ಪಟು ದಿನೇಶ್ ಗಾಣಿಗ ಕೋಟ, ಶೈಕ್ಷಣಿಕ ಸಾಧಕಿ ನಂದಿತಾ ಪೈ, ಕುಸ್ತಿಪಟು ಪ್ರೇರಣಾ ದಿನಕರ್ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ವಿಶೇಷ ಚೇತನರಿಗೆ ಸಹಾಯಹಸ್ತ ನೀಡಲಾಯಿತು. ಇತ್ತೀಚೆಗೆ ಅಗಲಿದ ದೇಗುಲದ ಪರಿಚಾರಕಿ ಕಾವೇರಿ ದೇವಾಡಿಗ, ಸ್ಥಳೀಯ ಕ್ರಿಕೆಟ್ ಪಟು ಸಾಗರ್ ಪೂಜಾರಿ ಇವರುಗಳಿಗೆ ಸಂತಾಪ ಸೂಚಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಸತೀಶ್ ಹೆಚ್ ಕುಂದರ್, ಉದ್ಯಮಿ ಸಂತೋಷ್ ಸುವರ್ಣ, ಉಮೇಶ್ ಆಚಾರ್, ಮಣೂರು ಫ್ರೆಂಡ್ಸ್ ಗೌರವಾಧ್ಯಕ್ಷ ಸುರೇಶ್ ಆಚಾರ್, ಅಧ್ಯಕ್ಷ ರಾಘವೇಂದ್ರ ಆಚಾರ್, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸದಸ್ಯ ಅಜಿತ್ ಆಚಾರ್ ಸ್ವಾಗತಿಸಿ, ಸನ್ಮಾನ ಪತ್ರ ವಾಚಿಸಿದರು. ಮಾಜಿ ಅಧ್ಯಕ್ಷ ಸುಧಾಕರ್ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ದಿನೇಶ್ ಆಚಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.