Home ಸುದ್ಧಿಗಳು ಪ್ರಾದೇಶಿಕ ಜನಪದ ಸರಣಿ ಕಲಾ ಕಾರ್ಯಾಗಾರ ಉದ್ಘಾಟನೆ

ಜನಪದ ಸರಣಿ ಕಲಾ ಕಾರ್ಯಾಗಾರ ಉದ್ಘಾಟನೆ

113
0

ಉಡುಪಿ, ಏ.19: ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಉಡುಪಿಯ ನಾಗಲಕ್ಷ್ಮಿ ಶ್ರೀನಿವಾಸ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಹಾಗೂ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್ ಮತ್ತು ಸೈನ್ಸ್, ಮಾಹೆಯ ಸಹಯೋಗದಲ್ಲಿ ಆಯೋಜಿಸುತ್ತಿರುವ ಜನಪದ ಸರಣಿ ಕಲಾ ಕಾರ್ಯಾಗಾರಗಳನ್ನು ನಿವೃತ್ತ ಪ್ರಾಂಶುಪಾಲರಾದ ಕೃಷ್ಣಮೂರ್ತಿ ರಾವ್ ಕಿದಿಯೂರು ಉದ್ಘಾಟಿಸಿದರು. ಭಾರತದ ದೇಸೀಯ ಕಲೆಗಳೆಲ್ಲ ಒಂದು ಮನೆಯ ಹಲವಾರು ಕೋಣೆಗಳಿದ್ದಂತೆ, ಈ ಕೋಣೆಗಳನ್ನು ಉಡುಪಿಯ ಕಲಾಸಕ್ತರಿಗೆ ಪರಿಚಯಿಸುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸುತ್ತ, ಈ ತೆರನಾದ ಭಾರತದ ಮೂಲೆಮೂಲೆಯಲ್ಲಿನ ಕಲಾಪ್ರಕಾರಗಳನ್ನು ಇನ್ನಶ್ಟು ಯುವ ಪೀಳಿಗೆ ಕಲಿತು ಆಸ್ವಾದಿಸಬೇಕು ಎಂದರು. ಸರಣಿ ಕಲಾ ಕಾರ್ಯಾಗಾರದ ಭಾಗವಾಗಿ ಮದುವೆಯ ಸಂದರ್ಭಗಳಲ್ಲಿ ಮಾಡಲಾಗುವ ಕೋಹ್ಬಾರ್ ಚಿತ್ರಕಲೆ, ಟಿಕುಲಿ ಹಾಗೂ ಮಂಜೂಷಾ ಚಿತ್ರಕಲೆ ಮತ್ತು ಜಾಲಿ ಫ್ರೇಂ ವಿನ್ಯಾಸಗಳ ಕಲೆಯನ್ನು ಈ ಬಾರಿ ಪರಿಚಯಿಸುತ್ತಿದ್ದು, ಬಿಹಾರದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾವಿದರಾದ ಶ್ರವಣ್ ಕುಮಾರ್ ಪಾಸ್ವಾನ್ ಹಾಗೂ ಪವನ್ ಕುಮಾರ್‌ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ೧೮ರಿಂದ ೨೧ರತನಕ ಪ್ರತಿದಿನ ಪೂರ್ವಾಹ್ನ ೯:೩೦ರಿಂದ ಸಂಜೆ ಐದರ ತನಕ ಬಡಗುಪೇಟೆಯ ಹತ್ತು ಮೂರು ಇಪ್ಪಂತ್ತೆಂಟು ಗ್ಯಾಲರಿಯಲ್ಲಿ ಈ ನಾಲ್ಕೂ ಕಾರ್ಯಾಗಾರಗಳು ನಡೆಯಲಿವೆ ಹಾಗೂ ಇದೇ ಸಂದರ್ಭದಲ್ಲಿ ಪ್ರತಿದಿನ ಸಂಜೆ ನಾಲ್ಕರಿಂದ ಆರರ ತನಕ ಕಲಾವಿದರ ಕಲಾ ಪ್ರದರ್ಶನ ಮತ್ತು ಮಾರಾಟವೂ ಬಡಗುಪೇಟೆಯಲ್ಲಿ ನಡೆಯಲಿಕ್ಕಿದೆ ಎಂಬುದಾಗಿ ಕಾರ್ಯಕ್ರಮದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ಮಾಹಿತಿಯಿತ್ತರು. ಭಾವನಾ ಪ್ರತಿಷ್ಠಾನದ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್‌ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.