ಉಡುಪಿ, ಏ.17: 2024 ನೇ ಸಾಲಿನ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಕರ್ನಾಟಕ ರಾಜ್ಯದ ನೆರೆ ರಾಜ್ಯಗಳಾಗಿರುವ ತಮಿಳುನಾಡು ರಾಜ್ಯದಲ್ಲಿ ಏಪ್ರಿಲ್ 19 ರ ಶುಕ್ರವಾರ ಹಾಗೂ ಅಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮೇ 13 ರ ಸೋಮವಾರದಂದು ಮತದಾನ ನಡೆಯಲಿದೆ. ಈ 3 ರಾಜ್ಯಗಳಲ್ಲಿ ಮತದಾರರಾಗಿರುವವರು ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆ ಇರುವ ಹಿನ್ನೆಲೆ, ಅಂತಹ ಮತದಾರರಿಗೆ ಮತದಾನದ ದಿನಾಂಕಗಳಂದು ಆಯಾ ಗಡಿ ಜಿಲ್ಲೆಗಳಲ್ಲಿನ ಕೈಗಾರಿಕೆಗಳು, ಕಾರ್ಖಾನೆಗಳು ಹಾಗೂ ಇನ್ನಿತರೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮತದಾರರಿಗೆ ಮಾತ್ರ ಸೀಮಿತವಾಗಿ ಮತದಾನ ಮಾಡಲು ಅನುಕೂಲವಾಗುವಂತೆ ರೆಪ್ರೆಸೆನ್ಟೇಶನ್ ಆಫ್ ಪೀಪಲ್ಸ್ ಆಕ್ಟ್ 1951 ರ ಸೆಕ್ಷನ್ 135 ಬಿ ಅಡಿಯಲ್ಲಿ ವೇತನ ಸಹಿತ ರಜೆಯನ್ನು ಘೋಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮತದಾನ ದಿನದಂದು ವೇತನ ಸಹಿತ ರಜೆ
ಮತದಾನ ದಿನದಂದು ವೇತನ ಸಹಿತ ರಜೆ
Date: