ಉಡುಪಿ, ಏ.15: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಮತದಾನ ದಿನದಂದು ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಏಪ್ರಿಲ್ 17 ರಂದು ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಎರಡನೇ ಹಂತದ ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರದವರಿಗೆ ಭಂಡಾರ್ಕರ್ಸ್ ಕಾಲೇಜು ಕುಂದಾಪುರದಲ್ಲಿ, ಉಡುಪಿ ವಿಧಾನಸಭಾ ಕ್ಷೇತ್ರದವರಿಗೆ ಸೈಂಟ್ ಸಿಸಿಲಿಸ್ ಸ್ಕೂಲ್ ಬ್ರಹ್ಮಗಿರಿ ಉಡುಪಿಯಲ್ಲಿ, ಕಾಪು ವಿಧಾನಸಭಾ ಕ್ಷೇತ್ರದವರಿಗೆ ದಂಡತೀರ್ಥ ಪಿ.ಯು.ಕಾಲೇಜ್ ಉಳಿಯಾರಗೋಳಿ ಕಾಪುವಿನಲ್ಲಿ, ಕಾರ್ಕಳ ವಿಧಾನಸಭಾ ಕ್ಷೇತ್ರದವರಿಗೆ ಕ್ರೈಸ್ಟ್ ಕಿಂಗ್ ಪಿ.ಯು.ಕಾಲೇಜ್ ಗಾಂಧಿ ಮೈದಾನ ಕಾರ್ಕಳದಲ್ಲಿ ನಡೆಯಲ್ಲಿದೆ. ಎರಡನೇ ಹಂತದ ತರಬೇತಿಗೆ ನಿಯೋಜಿಸಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರಕ್ಕೆ ಭಾಗವಹಿಸಲು ಅನುಕೂಲವಾಗುವಂತೆ ಉಚಿತ ಬಸ್ಸುಗಳ ವ್ಯವಸ್ಥೆಯನ್ನು ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಲಾಗಿದೆ.
ತರಬೇತಿ ಸ್ಥಳಗಳಿಗೆ ಪ್ರಯಾಣಿಸಲು ಈ ಕೆಳಗೆ ತಿಳಿಸಿರುವ ಸ್ಥಳಗಳಿಂದ ಬಸ್ಸುಗಳು ಹೊರಡಲಿದೆ. ಬೈಂದೂರು ವಿಧಾನ ಸಭಾ ಕ್ಷೇತ್ರದಿಂದ ತಾಲೂಕು ಆಡಳಿತ ಸೌಧ ಬೈಂದೂರು ನಿಂದ, ಹೆಚ್ಚಿನ ಮಾಹಿತಿಗಾಗಿ ಮೇಲ್ವಿಚಾರಕರು ಮೊಬೈಲ್ ಸಂಖ್ಯೆ :9482036207, 8431059053, 9036681599, 8095782859, 9743816440. ಕುಂದಾಪುರ ವಿಧಾನ ಸಭಾ ಕ್ಷೇತ್ರದಿಂದ ಗಾಂಧಿ ಮೈದಾನ ಕುಂದಾಫುರ ಇಲ್ಲಿಂದ ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9341049161, 8197809032, 7483054340, ಉಡುಪಿ ವಿಧಾನಸಭಾ ಕ್ಷೇತ್ರದಿಂದ ಬೋರ್ಡು ಹೈಸ್ಕೂಲ್ ಉಡುಪಿ ಇಲ್ಲಿಂದ ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9164146545, 9844218717, 9880913596, ಕಾಪು ವಿಧಾನ ಸಭಾ ಕ್ಷೇತ್ರದಿಂದ ಸರ್ವಿಸ್ ಬಸ್ ನಿಲ್ದಾಣ ಕಾಪು ಇಲ್ಲಿಂದ ಮೊ. ಸಂ.9972716555, 9845162068, 8095101024 ಹಾಗೂ ಕಾರ್ಕಳ ವಿಧಾನ ಸಭಾ ಕ್ಷೇತ್ರದಿಂದ ಕಾರ್ಕಳ [ಪೇಟೆ] ಬಸ್ ನಿಲ್ದಾಣ ಮತ್ತು ಬಂಡೀಮಠ ಬಸ್ ನಿಲ್ದಾಣದಿಂದ ಹೆಚ್ಚಿನ ಮಾಹಿತಿಗಾಗಿ ಮೊ.ಸಂ.8197028656, 8277404724, 8073752849, ಸಂಪರ್ಕಿಸಬಹುದು.
ಮತದಾನ ದಿನದಂದು ಕರ್ತವ್ಯಕ್ಕೆ ನೇಮಕಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಗಳು ಏಪ್ರಿಲ್ 17 ರಂದು ಪೂರ್ವಾಹ್ನ 7.00 ಗಂಟೆಗೆ ಸದ್ರಿ ಸ್ಥಳಗಳಲ್ಲಿ ಹಾಜರಿರಲು ತಿಳಿಸಿದೆ. ಎಲ್ಲಾ ಮತಗಟ್ಟೆ ಸಿಬ್ಬಂದಿಗಳು ಕಡ್ಡಾಯವಾಗಿ ತರಬೇತಿಗೆ ಹಾಜರಾಗತಕ್ಕದ್ದು. ತಪ್ಪಿದ್ದಲ್ಲಿ ಜನಪ್ರತಿನಿಧಿ ಕಾಯ್ದೆ 1951 ಕಲಂ 134 ರನ್ವಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.