Home ಸುದ್ಧಿಗಳು ಪ್ರಾದೇಶಿಕ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಮತದಾರರ ಜಾಗೃತಿ ಕಾರ್ಯಕ್ರಮ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಮತದಾರರ ಜಾಗೃತಿ ಕಾರ್ಯಕ್ರಮ

159
0

ಉಡುಪಿ, ಏ.8: ನಂದಳಿಕೆ ಗ್ರಾಮ ಪಂಚಾಯತ್, ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದೊಂದಿಗೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ರಂಗಮಂದಿರದಲ್ಲಿ ಮತದಾರರ ಜಾಗೃತಿ, ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಜರಗಿತು. ನಂದಳಿಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧೀಶ ರಾವ್ ಅವರು ಮಾತನಾಡಿ, ಎಪ್ರಿಲ್ 26 ರಂದು ಪ್ರತಿಯೊಬ್ಬ ಮತದಾರನು ನಿರ್ಭೀತಿಯಿಂದ ಮತದಾನ ಮಾಡಿ, ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸೋಣ ಎಂದರು. ನಂದಳಿಕೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕಸ್ತೂರಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷ ಸತೀಶ್ ಪೂಜಾರಿ ಅಬ್ಬನಡ್ಕ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಸದಸ್ಯರಾದ ಸುರೇಶ್ ಅಬ್ಬನಡ್ಕ, ಲಲಿತಾ ಆಚಾರ್ಯ, ವೀಣಾ ಆಚಾರ್ಯ, ನಂದಳಿಕೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ನವೀನ್, ಅಂಜುಮ್, ಪ್ರತಿಮಾ ಹಾಗೂ ಕೆದಿಂಜೆ ಲಕ್ಷ್ಮಿ ಜನಾರ್ಧನ ಸ್ವಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.