ಬಾರಕೂರು, ಮಾ.28: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾರ್ಕೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಹಾಗೂ 2 ರೇಂಜರ್ಸ್ ರೋವರ್ಸ್ ಘಟಕಗಳು, ರೋಟರಿ ಕ್ಲಬ್ ಬಾರ್ಕೂರು ಇದರ ಸಂಯುಕ್ತ ಆಶ್ರಯದಲ್ಲಿ ‘ವಾಟರ್ ಸ್ಯಾನಿಟೇಶನ್ ಅಂಡ್ ಹೈಜೀನ್’ ವಿಚಾರಗೋಷ್ಠಿ ನಡೆಯಿತು. ವಾಟರ್ ಸ್ಯಾನಿಟೇಶನ್ ಅಂಡ್ ಹೈಜೀನ್, ಡಿಸ್ಟ್ರಿಕ್ಟ್ ಚೇರ್ಮನ್ ವಾಲ್ಟರ್ ಸಿರಿಲ್ ಪಿಂಟೋ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಜೋಸೆಫ್ ಜಿ ಎಂ ರೆಬೆಲ್ಲೊ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ರೋಟರಿ ಕ್ಲಬ್ ಬಾರ್ಕೂರಿನ ಅಧ್ಯಕ್ಷರಾದ ಸೀತಾರಾಮ್ ಎಸ್ ಹಾಗೂ ಕಾರ್ಯದರ್ಶಿ ಬಾಬು ನಾಯಕ್ ಕಾರ್ಯಕ್ರಮ ಆಯೋಜಿಸುವಲ್ಲಿ ಸಹಕರಿಸಿದರು. ಕಾಲೇಜಿನ ರಾ. ಸೇ. ಯೋಜನಾ ಯೋಜನಾಧಿಕಾರಿಗಳಾದ ಶೃತಿ ಆಚಾರ್ಯ ಎನ್ ಹಾಗೂ ರಾಧಾಕೃಷ್ಣ ನಾಯಕ್ ಕಾರ್ಯಕ್ರಮ ಆಯೋಜಿಸಿದರು. ಕಾಲೇಜಿನ ಪ್ರಾಂಶುಪಾಲರು ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾಕೋಶದ ಸಂಚಾಲಕರಾದ ವಿದ್ಯಾ ಪಿ ಹಾಗು ಅಕಾಡೆಮಿಕ್ ಕೌನ್ಸಿಲರ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶೋಭಾ ಆರ್ ಉಪಸ್ಥಿತರಿದ್ದರು. ರೋವರ್ಸ್ ಘಟಕದ ಸಂಯೋಜಕರಾದ ಸತೀಶ್ ಕುಮಾರ್ ಬಿ. ಡಿ. ಸಹಕರಿಸಿದರು. 110 ವಿದ್ಯಾರ್ಥಿಗಳು ವಿಚಾರಗೋಷ್ಠಿಯ ಪ್ರಯೋಜನವನ್ನು ಪಡೆದುಕೊಂಡರು.
ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾರಕೂರು: ವಿಚಾರಗೋಷ್ಠಿ
ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾರಕೂರು: ವಿಚಾರಗೋಷ್ಠಿ
Date: