Wednesday, January 22, 2025
Wednesday, January 22, 2025

ರಾಮ (ಲಕ್ಷ್ಮಣ) ಬಲರಾಮರ ಸನ್ನಿಧಿಗಳ ಪುನರುತ್ಥಾನ ಕಾಲನಿರ್ಣಯದಂತಿದೆ: ಪೇಜಾವರ ಶ್ರೀ

ರಾಮ (ಲಕ್ಷ್ಮಣ) ಬಲರಾಮರ ಸನ್ನಿಧಿಗಳ ಪುನರುತ್ಥಾನ ಕಾಲನಿರ್ಣಯದಂತಿದೆ: ಪೇಜಾವರ ಶ್ರೀ

Date:

ಮಲ್ಪೆ, ಮಾ.25: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ದೇಗುಲ ನಿರ್ಮಾಣ ಮತ್ತು ಪ್ರಾಣಪ್ರತಿಷ್ಠಾಪನೆ ಮತ್ತು ಅದರ ಬಳಿಕ ಉಡುಪಿ ವಡಭಾಂಡೇಶ್ವರದಲ್ಲಿ ಪ್ರಾಚೀನವಾದ ಪೂರ್ವಾವತಾರದಲ್ಲಿ ಲಕ್ಷ್ಮಣನೇ ಆಗಿದ್ದ ಬಲರಾಮರ ಸನ್ನಿಧಿಯ ಪುನರುತ್ಥಾನ ಪುನಃ ಪ್ರತಿಷ್ಠೆಯೂ ಸಂಪನ್ನಗೊಳ್ಳುತ್ತಿರುವುದು ಅತ್ಯಂತ ಅಚ್ಚರಿಯ ಸಂಗತಿಯಾಗಿದ್ದು ಕಾಲವೇ ಈ ಎರಡನ್ನೂ ನಿರ್ಣಯಿಸಿದಂತಿದೆ ಎಂದು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

ಅಯೋಧ್ಯೆಯ ರಾಮನ ಪಾದಮೂಲದಲ್ಲಿಟ್ಟು ಅರ್ಚಿಸಿ ಪೂಜಿಸಿ ತಾವು ತೆಗೆದುಕೊಂಡು ಬಂದ ಭಗವಂತನ ಸಂಕರ್ಷಣ ಸಾಲಿಗ್ರಾಮವನ್ನು ನವೀಕರಣಗೊಂಡ ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನಕ್ಕೆ ಹಸ್ತಾಂತರಿಸಿ ಸಂತಸ ವ್ಯಕ್ತಪಡಿಸಿದರು. ಇದೊಂದು ಅಪೂರ್ವ ಯೋಗವಾಗಿದ್ದು ಬಲರಾಮನು ತ್ರೇತಾಯುಗದಲ್ಲಿ ಲಕ್ಷ್ಮಣನಾಗಿ ಅವತರಿಸಿದ್ದ. ಭಗವಂತನ ಸಂಕರ್ಷಣರೂಪವೇ ಆಗಿರುವುದರಿಂದ ಬಲರಾಮನಲ್ಲಿಗೆ ಅಯೋಧ್ಯೆಯಿಂದ ಸಂಕರ್ಷಣ ಸಾಲಿಗ್ರಾಮವನ್ನು ಪೂಜಿಸಿ ತರಲಾಗಿದೆ. ಆ ಹಿನ್ನೆಲೆಯಲ್ಲಿ ರಾಮ‌ ಬಲರಾಮರ ಸನ್ನಿಧಿಗಳ ಪುನರುತ್ಥಾನ ಕಾರ್ಯ ಏಕಕಾಲದಲ್ಲಿ ನಡೆಯುತ್ತಿರುವುದರಿಂದ ದೇಶಕ್ಕೆ ಮಂಗಳವಾಗಲಿದೆ. ಈ ಸತ್ಕಾರ್ಯದಲ್ಲಿ ಕೈಜೋಡಿಸಿದ ಪ್ರತಿಯೊಬ್ಬರಿಗೂ ರಾಮ ಬಲರಾಮರ ಅನುಗ್ರಹದ ಬಲ ಸದಾ ಇರಲಿ ಎಂದರು .

ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ನಿಮಿತ್ತ ಹಮ್ಮಿಕೊಂಡ ಭಜನೋತ್ಸವಕ್ಕೆ ತಾಳ ಹಿಡಿದು ಭಜನೆ ಮಾಡಿ ಚಾಲನೆ ನೀಡಿದರು. ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ಪ್ರಧಾನ ಅರ್ಚಕ ಶ್ರೀನಿವಾಸ ಭಟ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕಡೆಕಾರ್ ಶ್ರೀಶ ಭಟ್, ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಡಾ. ಸತ್ಯನಾರಾಯಣ ಆಚಾರ್ಯ, ಪೆರಂಪಳ್ಳಿ ವಾಸುದೇವ ಭಟ್, ಮುರಳೀಕೃಷ್ಣರಾವ್ ಬಡಾನಿಡಿಯೂರು ಮತ್ತಿತರರು ಇದ್ದರು.‌

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಪ್ಪೂರು: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿ; ಉಡುಪಿ ಜಿಲ್ಲೆಯ ಸ್ವಚ್ಛತೆಗೆ ಇದೊಂದು ದೊಡ್ಡ ಕಪ್ಪುಚುಕ್ಕೆ

ಉಪ್ಪೂರು, ಜ.21: ಒಂದೆಡೆ ದೇಶಾದ್ಯಂತ ಸ್ವಚ್ಛತೆಯ ಕಾಳಜಿಯ ಬಗ್ಗೆ ಸರಣಿ ಕಾರ್ಯಕ್ರಮಗಳು...

ಪಾಳೆಕಟ್ಟೆ: ನೂತನ ಬಸ್ಸು ತಂಗುದಾಣಕ್ಕೆ ಭೂಮಿ ಪೂಜೆ

ಕೊಡವೂರು, ಜ.21: ಕೊಡವೂರು ವಾರ್ಡಿನ ಪಾಳೆಕಟ್ಟೆಯಲ್ಲಿ ಬಸ್ಸು ತಂಗುದಾಣಕ್ಕೆ ನಗರಸಭಾ ಸದಸ್ಯರಾದ...

ಸಂಚಾರ ಪ್ರಜ್ಞೆಯು ಜೀವನದ ಭಾಗವಾಗಬೇಕು: ಮನೋಹರ್ ಹೆಚ್ ಕೆ

ಮಣಿಪಾಲ, ಜ.21: ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು, ಉಡುಪಿ ಜಿಲ್ಲಾ ಪೊಲೀಸ್​...
error: Content is protected !!