Home ಸುದ್ಧಿಗಳು ಪ್ರಾದೇಶಿಕ ಬ್ರಾಹ್ಮಣ ಮಹಾಸಭಾ ಕೊಡವೂರು: ಮಹಿಳಾ ದಿನಾಚರಣೆ

ಬ್ರಾಹ್ಮಣ ಮಹಾಸಭಾ ಕೊಡವೂರು: ಮಹಿಳಾ ದಿನಾಚರಣೆ

91
0

ಕೊಡವೂರು, ಮಾ.12: ಅಂತರಾಷ್ಟ್ರೀಯ ‌ಮಹಿಳಾ ದಿನದ ಅಂಗವಾಗಿ ಕೊಡವೂರು ಬ್ರಾಹ್ಮಣ ಮಹಾಸಭಾದಿಂದ ಅಪರೂಪದ ಚುಕ್ಕಿ ಮಂಡಲ ಆರ್ಟ್ ಕಲಾವಿಭಾಗದಲ್ಲಿ ರಾಷ್ಟ್ರೀಯ ‌ಮಟ್ಟದಲ್ಲಿ ಸಾಧನೆಗೈದ ಕಲಾವಿದೆ, ರಂಗವಲ್ಲಿ,ಸಂಗೀತ, ವಾರ್ಲಿ ಕಲೆ, ಫ್ಯಾಬ್ರಿಕ್ ಪೇಂಟಿಂಗ್, ಕಸೂತಿ ಹೀಗೆ ಲಲಿತ ಕಲೆಗಳ ವಿವಿಧ ಪ್ರಕಾರಗಳಲ್ಲಿ ಸಾಧನೆಗೈದ ಅಶ್ವಿನಿ ಶ್ರೀನಿವಾಸ್ ಇವರನ್ನು ಅವರ ಸ್ವಗೃಹ ಶ್ರೀವಾಸದಲ್ಲಿ ಅಭಿನಂದಿಸಲಾಯಿತು‌. ಬ್ರಾಹ್ಮಣ ಮಹಾಸಭಾ ಕೊಡವೂರು ಇದರ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ, ಕೋಶಾಧಿಕಾರಿ ಶ್ರೀಧರ ಶರ್ಮ, ಸದಸ್ಯರಾದ ರೋಹಿಣಿ ಬಾಯರಿ, ಸೌಮ್ಯಾ ಗಣೇಶ್, ಕೌಸ್ತುಭ ಚಂದನ್, ಶೃತಿ ಸುಕುಮಾರ್, ಮುರಳೀಧರ ಭಟ್, ಸುಲೋಚನಾ ಉಪಾಧ್ಯಾಯ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ರಾಜಶ್ರೀ ಪ್ರಸನ್ನ ಸನ್ಮಾನ ಪತ್ರ ವಾಚಿಸಿದರು. ಪದಾಧಿಕಾರಿ ದೀಪಾ ರಾಮಕೃಷ್ಣ ವಂದಿಸಿದರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.