ಹಾವಂಜೆ, ಜ.13: ಪುರಾತನ ಪ್ರಸಿದ್ಧ 8ನೇ ಶತಮಾನದ ಗಾಲವ ಋಷಿ ತಪಸ್ಸು ಮಾಡಿದ್ದ ಕೀಳಂಜೆ ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಹರಿಹರ ತೀರ್ಥದ ಸಮಗ್ರ ಜೀರ್ಣೋದ್ಧಾರ ಪ್ರಯುಕ್ತ ಮುಷ್ಟಿ ಕಾಣಿಕೆಯಾದಿ ಪ್ರಾಯಶ್ಚಿತ್ತ ಹೋಮಾದಿಗಳು ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಜನವರಿ 22 ರಿಂದ ಪ್ರಾರಂಭವಾಗಲಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಭದ್ರದೀಪಸಮರ್ಪಣೆ, ಮುಷ್ಟಿಕಾಣಿಕೆ, ಮೃತ್ಯುಂಜಯ ಹೋಮ ಹಾಗು ಇತರ ಹೋಮಗಳು ನಡೆಯಲಿವೆ. ಜನವರಿ 23 ಮಂಗಳವಾರದಂದು ಬೆಳಿಗ್ಗೆ ನವಕ ಪ್ರಧಾನ ಹೋಮ, ನವಗ್ರಹ ಶಾಂತಿ, ಸಂಜೆ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. ಜನವರಿ 31 ಬುಧವಾರ ಸರ್ಪ ಸಂಸ್ಕಾರ ಕ್ರಿಯೆಯ ಮಂಗಳ, ಆಶ್ಲೇಷ ಬಲಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಎಲ್ಲಾ ದೇವತಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು ಮನ ಧನಗಳಿಂದ ಸಹಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.