Friday, October 18, 2024
Friday, October 18, 2024

ಕರ್ಣಾಟಕ ಬ್ಯಾಂಕ್ ಕೋಟ ಶಾಖೆ: 57ನೇ ವರ್ಷಾಚರಣೆ

ಕರ್ಣಾಟಕ ಬ್ಯಾಂಕ್ ಕೋಟ ಶಾಖೆ: 57ನೇ ವರ್ಷಾಚರಣೆ

Date:

ಕೋಟ, ಡಿ.26: ಕರ್ಣಾಟಕ ಬ್ಯಾಂಕ್ ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರ ಜನಸ್ನೇಹಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮತ್ಸ್ಯೋದ್ಯಮಿ ಆನಂದ್ ಸಿ ಕುಂದರ್ ಹೇಳಿದರು. ಕೋಟ ಕರ್ಣಾಟಕ ಬ್ಯಾಂಕ್ ಶಾಖೆ ಆರಂಭಗೊಂಡು 57ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ಣಾಟಕ ಬ್ಯಾಂಕ್ ದೇಶದಾದ್ಯಂತ ತನ್ನ ವ್ಯವಹಾರವನ್ನು ಕುದರಿಸಿಕೊಂಡಿದೆ. ತನ್ನ ಸಿಎಸ್‌ಆರ್ ಫಂಡ್ ಮೂಲಕ ಕರಾವಳಿ ಭಾಗದ ಶೈಕ್ಷಣಿಕ, ಧಾರ್ಮಿಕ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಿಗೆ ಹಣ ವಿನಿಯೋಗಿಸಿದೆ. ಇತ್ತೀಚಿಗಿನ ವರ್ಷಗಳಲ್ಲಿ ಆರ್ಥಿಕ ವಹಿವಾಟು ವೃದ್ಧಿಸಿಕೊಂಡು ಪ್ರತಿ ಮನೆಗಳ ಮನಗೆದ್ದ ಬ್ಯಾಂಕ್ ಆಗಿದೆ ಎಂದರು. ಲಕ್ಕಿ ಕೂಪನ್ ವ್ಯವಸ್ಥೆ ಮಾಡಿದ್ದು ಶಾಖೆಯಲ್ಲಿ ಖಾತೆ ಹೊಂದಿದ ಐವರು ಗ್ರಾಹಕರು ಲಕ್ಕಿ ಬಂಪರ್ ಗಳಿಸಿಕೊಂಡರು. ಇದನ್ನು ಆನಂದ್ ಸಿ ಕುಂದರ್ ನೆರವೇರಿಸಿಕೊಟ್ಟರು.

ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ಚರ‍್ಮೇನ್ ವಿಷ್ಣುಮೂರ್ತಿ ಉಪಾಧ್ಯಾ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್, ಶ್ರೀ ದೇವಿ ಕಿರಣ್ ಕಾಂಪ್ಲೆಕ್ಸ್ ಮಾಲಿಕ ಶ್ರೀಕಾಂತ್ ಶೆಣೈ ಕೋಟ ಮತ್ತಿತರರು ಉಪಸ್ಥಿತರಿದ್ದರು. ಕರ್ಣಾಟಕ ಬ್ಯಾಂಕ್ ಕೋಟ ಶಾಖಾ ಪ್ರಬಂಧಕ ಸಂತೋಷ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಬಂಧಕ ರಾಘವೇಂದ್ರ ರಾವ್ ವಂದಿಸಿದರು. ಬ್ಯಾಂಕ್ ಸಿಬ್ಬಂದಿ ನಾಗೇಶ್ ಮಯ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!